ಪಣಜಿ: ಒಟಿಟಿಯಲ್ಲಿ ಅವಕಾಶ ಪಡೆಯಲು ಕನ್ನಡ ಸಿನಿಮಾಗಳು ಎದುರು ನೋಡುತ್ತಿವೆ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.
ಇಲ್ಲಿ ನಡೆಯುತ್ತಿರುವ ಭಾರತೀಯ ಅಂತರರಾಷ್ಟ್ರೀಯ ಫಿಲಂ ಫೆಸ್ಟಿವಲ್‌ನಲ್ಲಿ (IFFI) ಭಾಗವಹಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎನ್‌ಡಿಎಫ್‌ಸಿ ಫಿಲಂ ಬಜಾರ್ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಕನ್ನಡದ ಸಿನಿಮಾಗಳು ಆದಾಯ ಗಳಿಸುತ್ತಿವೆ ಎಂದರು.
ಕೋವಿಡ್ –19 ಸಾಂಕ್ರಾಮಿಕದ ಬಳಿಕ ಒಟಿಟಿ ವೇದಿಕೆಗಳಿಂದಾಗಿ ಮಾರುಕಟ್ಟೆ ಬಿತ್ತು. ಕನ್ನಡದ ಒಂದು ವಾಣಿಜ್ಯ ಸಿನಿಮಾದಿಂದ ನಷ್ಟವಾಗಿದ್ದರಿಂದ ಒಟಿಟಿಗಳು ಕನ್ನಡ ಸಿನಿಮಾವನ್ನು ಒಪ್ಪಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು.
ಒಟಿಟಿಗಳು ಕನ್ನಡ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಒಂದು ಸಿನಿಮಾದಿಂದಾಗಿ, ಇಡೀ ಕನ್ನಡ ಸಿನಿಮಾಗೆ ಮಾರುಕಟ್ಟೆ ಇಲ್ಲ, ಚಂದಾದಾರರು ಇಲ್ಲ ಎನ್ನುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.