ಎಸ್.ಭಗತ್ ರಾಜ್ ನಿರ್ದೇಶನದ, ಪ್ರವೀಣ್ ನಾಯಕನಾಗಿ ನಟಿಸಿರುವ ‘ಠಾಣೆ’ ಸಿನಿಮಾ ಮೇ 30ರಂದು ತೆರೆಕಾಣುತ್ತಿದೆ.
ಪಿ.ಸಿ.ಡಿ 2 ಫಿಲಂ ಫ್ಯಾಕ್ಟರಿ ಲಾಂಛನದಲ್ಲಿ ಗಾಯತ್ರಿ ಎಂ. ಈ ಸಿನಿಮಾ ನಿರ್ಮಿಸಿದ್ದಾರೆ. ನಟಿ ಮಾಲತಿ ಸುಧೀರ್ ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು.
‘ಒಂದು ಪೊಲೀಸ್ ಠಾಣೆಯಲ್ಲಿನ ಒಂದು ಪ್ರಕರಣದ ಕುರಿತು ಹಾಗೂ ನಾಲ್ಕು ಪ್ರಮುಖ ಪಾತ್ರಗಳ ಸುತ್ತ ನಡೆಯುವ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಚಿತ್ರದಲ್ಲಿ ತಂದೆ-ಮಗನ, ಅಣ್ಣ-ತಂಗಿಯ ನಡುವಿನ ಭಾವನಾತ್ಮಕ ದೃಶ್ಯಗಳಿವೆ, ಜೊತೆಗೊಂದು ಪ್ರೇಮಕಥೆಯೂ ಇದೆ. ಚಿತ್ರಕ್ಕೆ ‘C/O ಶ್ರೀರಾಮಪುರ’ ಎಂಬ ಅಡಿಬರಹವನ್ನು ನೀಡಿದ್ದೇವೆ. ಅದು ಏನಕ್ಕೆ ಎಂಬುವುದನ್ನು ಸಿನಿಮಾದಲ್ಲೇ ನೋಡಬೇಕು’ ಎಂದರು ಭಗತ್ ರಾಜ್.
ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ನಾಯಕ ಪ್ರವೀಣ್ ಅವರಿಗೆ ಇದು ಚೊಚ್ಚಲ ಸಿನಿಮಾ. ರೋಹಿತ್ ನಾಗೇಶ್, ಪಿ.ಡಿ.ಸತೀಶ್ ಚಂದ್ರ, ಮಾನಸ ಹೊಳ್ಳ ಚಿತ್ರದ ತಾರಾಬಳಗದಲ್ಲಿದ್ದಾರೆ. ಪ್ರಶಾಂತ್ ಸಾಗರ್ ಛಾಯಾಚಿತ್ರಗ್ರಹಣ ಹಾಗೂ ಸುರೇಶ್ ಅರಸ್ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.