ADVERTISEMENT

ಕಾರ್ಯಕರ್ತರಿಗೆ ಕಾಂತಾರ ತೋರಿಸಲು ಇಡೀ ಚಿತ್ರಮಂದಿರ ಬುಕ್ ಮಾಡಿದ ಪ್ರತಾಪ್ ಸಿಂಹ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಅಕ್ಟೋಬರ್ 2025, 4:55 IST
Last Updated 4 ಅಕ್ಟೋಬರ್ 2025, 4:55 IST
<div class="paragraphs"><p>ಪ್ರತಾಪ್‌ ಸಿಂಹ</p></div>

ಪ್ರತಾಪ್‌ ಸಿಂಹ

   

ರಿಷಬ್ ಶೆಟ್ಟಿ

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಸಿನಿಮಾ ಅಕ್ಟೋಬರ್ 2ರಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಕನ್ನಡ, ತೆಲುಗು ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಕಾಂತಾರ ಚಾಪ್ಟರ್ 1 ತೆರೆ ಕಂಡಿದೆ.

ADVERTISEMENT

ಕಾಂತಾರ ಚಾಪ್ಟರ್‌ 1 ಸಿನಿಮಾ ವೀಕ್ಷಣೆಗೆ ಮೈಸೂರಿನ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಇಡೀ ಚಿತ್ರಮಂದಿರ ಬುಕ್ ‌ಮಾಡಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡ ಮಾಜಿ ಸಂಸದ ಪ್ರತಾಪ್‌ ಸಿಂಹ, ‘ಭಾನುವಾರ 4 ಗಂಟೆಗೆ ಕಾರ್ಯಕರ್ತರೆಲ್ಲ ಸೇರಿ ಕಾಂತಾರ-2 ನೋಡೋಣ, ಡಿಆರ್‌ಸಿಯಲ್ಲಿ ಫುಲ್ ಸ್ಕ್ರೀನ್ ಬುಕ್ ಮಾಡಿದ್ದೇನೆ’ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ. ಒಟ್ಟು 197 ಟಿಕೆಟಿಗೆ ಪ್ರತಾಪ್‌ ಸಿಂಹ ₹68,920 ಪಾವತಿಸಿ ಥಿಯೇಟರ್‌ ಬುಕ್‌ ಮಾಡಿದ್ದಾರೆ. 

ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಸಿನಿಮಾ ಭಾರತದಲ್ಲಿ ಒಟ್ಟು 6,500 ಚಿತ್ರ ಮಂದಿರಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನಗೊಂಡಿದ್ದವು. ಕಾಂತಾರ ಚಾಪ್ಟರ್‌ ಅಧ್ಯಾಯ 1 ನೋಡಿದ ಪ್ರೇಕ್ಷಕರು ಕೂಡ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.