ADVERTISEMENT

ನಿದ್ದೆಯಿಲ್ಲದೇ ಶೂಟಿಂಗ್: ಕಾಂತಾರ ಬಗ್ಗೆ ಕ್ವಾಟ್ಲೆ ಕಿಚನ್ ವಿನ್ನರ್ ಹೇಳಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2025, 6:21 IST
Last Updated 3 ಅಕ್ಟೋಬರ್ 2025, 6:21 IST
<div class="paragraphs"><p>ಕ್ವಾಟ್ಲೆ ಕಿಚನ್ ವಿನ್ನರ್&nbsp;ರಾಘವೇಂದ್ರ ಎಸ್ ಹೊಂಡದಕೇರಿ</p></div>

ಕ್ವಾಟ್ಲೆ ಕಿಚನ್ ವಿನ್ನರ್ ರಾಘವೇಂದ್ರ ಎಸ್ ಹೊಂಡದಕೇರಿ

   

ಚಿತ್ರ: ಇನ್‌ಸ್ಟಾಗ್ರಾಮ್‌

ಸ್ಯಾಂಡಲ್‌ವುಡ್‌ ನಟ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್‌ 1’ ಚಿತ್ರಕ್ಕೆ ವಿಶ್ವಾದಂತ್ಯ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಅನೇಕ ಸ್ಟಾರ್‌ ನಟ ನಟಿಯರು ಪಾತ್ರಕ್ಕೆ ಜೀವ ತುಂಬಿದ್ದಾರೆ. ನೂರಾರು ಕಲಾವಿದರು ಕಾಂತಾರ ಚಾಪ್ಟರ್‌ 1ರಲ್ಲಿ ನಟಿಸಿದ್ದಾರೆ.

ADVERTISEMENT

ಇನ್ನು, ‘ಕ್ವಾಟ್ಲೆ ಕಿಚನ್’ ವಿಜೇತರಾದ ರಾಘವೇಂದ್ರ ಅವರು ಕೂಡ ಕಾಂತಾರ ಚಾಪ್ಟರ್‌ 1ರಲ್ಲಿ ಅಭಿನಯಿಸಿದ್ದಾರೆ. ಈ ಖುಷಿಯ ವಿಚಾರವನ್ನು ನಟ ರಾಘವೆಂದ್ರ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ನಟ ರಿಷಬ್‌ ಶೆಟ್ಟಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ನಟ ರಾಘವೇಂದ್ರ ಹೇಳಿದ್ದೇನು..?

‘ಕಾಂತಾರ ಚಾಪ್ಟರ್ 1 ಕೇವಲ ನಟನೆಗಿಂತ ಹೆಚ್ಚಿನದಾಗಿತ್ತು. ಅದರಲ್ಲಿ ಉತ್ಸಾಹ, ತಾಳ್ಮೆ ಮತ್ತು ತಂಡದ ಕೆಲಸವಾಗಿತ್ತು. ಸುಮಾರು 10–12 ದಿನಗಳ ಕಾಲ ತೀವ್ರ ತಯಾರಿ ಮಾಡಲಾಗಿತ್ತು. ಪ್ರತಿದಿನ 4 ರಿಂದ 5 ಗಂಟೆಗಳ ಮೇಕಪ್, ಭಾರವಾದ ವಿಗ್‌ಗಳು, ವೇಷಭೂಷಣಗಳು ಮತ್ತು ಕುಂದಾಪುರದ ಬಿಸಿಲಿನಲ್ಲಿ ನಿದ್ದೆಯಿಲ್ಲದ ರಾತ್ರಿಯಲ್ಲಿ ಶೂಟಿಂಗ್‌, ನನ್ನನ್ನು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿದೆ’.

‘ಆದರೆ ಇಂದು ದೊಡ್ಡ ಪರದೆಯ ಮೇಲೆ ನನ್ನನ್ನು ನಾನು ನೋಡುವುದೇ ಒಂದು ಪುಣ್ಯ. ಮೇಕಪ್ ತಂಡ, ಕ್ಯಾಮೆರಾದ ಹಿಂದಿನ ಸಿಬ್ಬಂದಿ ಮತ್ತು ಎಲ್ಲರಿಗೂ ಅಪಾರ ಗೌರವ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇದನ್ನು ನನ್ನಿಂದ ಸಾಧ್ಯವಾಗಿಸಿದ್ದಕ್ಕಾಗಿ ರಿಷಬ್‌ ಶೆಟ್ಟಿ ಸರ್ ನಿಮಗೆ ಧನ್ಯವಾದಗಳು’ ಎಂದು ರಾಘವೇಂದ್ರ ಎಸ್ ಹೊಂಡದಕೇರಿ ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.