ADVERTISEMENT

‘ಕಾಂತಾರ’ ಚಿತ್ರ ನೋಡಿ ಮಾತೇ ಬರುತ್ತಿಲ್ಲ: ರಿಷಬ್ ನಟನೆಗೆ ಅನುಪಮ್ ಖೇರ್ ಬಹುಪರಾಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2025, 10:18 IST
Last Updated 6 ಅಕ್ಟೋಬರ್ 2025, 10:18 IST
<div class="paragraphs"><p>ಚಿತ್ರ:&nbsp;<a href="https://x.com/AnupamPKher">@AnupamPKher</a></p></div>

ಚಿತ್ರ: @AnupamPKher

   

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ: ಚಾಪ್ಟರ್-1' ಗುರುವಾರ (ಅ.2) ಅದ್ಧೂರಿಯಾಗಿ ತೆರೆಕಂಡಿದೆ. ಸಿನಿಮಾ ಕಣ್ತುಂಬಿಕೊಂಡ ಪ್ರೇಕ್ಷಕರು ಕೂಡ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಸುಮಾರು 5000ಕ್ಕೂ ಹೆಚ್ಚು ಪರದೆಗಳಲ್ಲಿ ಪ್ರದರ್ಶನಗೊಂಡಿರುವ ಕಾಂತಾರ ಚಾಪ್ಟರ್-1 ಬಗ್ಗೆ ಸಿನಿಮಾ ರಂಗದ ಪ್ರಮುಖರು ಹಾಡಿ ಹೊಗಳುತ್ತಿದ್ದಾರೆ.

ಇನ್ನು, ಕಾಂತಾರ ಚಾಪ್ಟರ್ 1 ಸಿನಿಮಾ ವೀಕ್ಷಿಸಿದ ಬಾಲಿವುಡ್‌ ಖ್ಯಾತ ನಟ ಅನುಪಮ್ ಖೇರ್ ಅವರು ರಿಷಬ್‌ ಶೆಟ್ಟಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಸಿನಿಮಾ ನೋಡಿ ನಟ ಅನುಪಮ್ ಖೇರ್ ವಿಡಿಯೊ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ಕೊಟ್ಟಿದ್ದಾರೆ.

ADVERTISEMENT

ಆ ವಿಡಿಯೊದಲ್ಲಿ ನಟ ಅನುಪಮ್ ಖೇರ್, ‘ಪ್ರೀತಿಯ ರಿಷಬ್, ನಾನು ಕಾಂತಾರ ನೋಡಿ ಬಂದೆ. ಮಾತೇ ಬರುತ್ತಿಲ್ಲ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇದೇ ವಿಡಿಯೊವನ್ನು ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಅಷ್ಟೇ ಅಲ್ಲದೇ ನಟ ಅನುಪಮ್ ಖೇರ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಬರೆದುಕೊಂಡಿದ್ದಾರೆ. ‘ಪ್ರೀತಿಯ ರಿಷಬ್‌ ಶೆಟ್ಟಿ, ನನ್ನ ತಾಯಿ, ಸಹೋದರ, ಹರ್ಮನ್ ಮತ್ತು ಫಾಲ್ಗುಣಿ ಅವರೊಂದಿಗೆ ಕಾಂತಾರ ವೀಕ್ಷಿಸಿದೆ. ನಿಮ್ಮ ಮತ್ತು ನಿಮ್ಮ ಇಡೀ ತಂಡದ ಪ್ರತಿಭೆಯನ್ನು ವಿವರಿಸಲು ನನಗೆ ಇನ್ನೂ ಹೆಚ್ಚಿನ ಪದಗಳಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಭಗವಾನ್ ರಾಮನು ನಿಮ್ಮನ್ನು ಆಶೀರ್ವದಿಸಲಿ. ನಿಮ್ಮೆಲ್ಲರಿಗೂ ಜೈ ಹೋ’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.