
‘ಕರಾವಳಿ‘ ಚಿತ್ರದ ಪೋಸ್ಟರ್ ಒಂದನ್ನು ನಟ ರಾಜ್ ಬಿ ಶೆಟ್ಟಿ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡು, ಚಿತ್ರತಂಡಕ್ಕೆ ಸ್ವಾಗತ ಎಂದು ಬರೆದುಕೊಂಡಿದ್ದಾರೆ.
ರಾಜ್ ಬಿ ಶೆಟ್ಟಿ ಅವರು ನಿರ್ದೇಶನ, ನಟನೆ, ಮೂಲಕ ಸಾಲು ಸಾಲು ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ನಿರ್ಮಿಸಿ, ನಟಿಸಿದ ಮನರಂಜನೆಯ ಮಾಲೆಪಟಾಕಿ ಸಿಡಿಸಿದ ‘ಸು ಫ್ರಮ್ ಸೋ‘ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ಸು ಕಂಡಿತ್ತು.
ಸಿನಿಪಯಣದಲ್ಲಿ ನಿರಂತರವಾಗಿ ಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ರಾಜ್ ಅವರು, 'ಸು ಫ್ರಮ್ ಸೋ'ನ ಕರುಣಾಕರ ಗುರೂಜಿಯಾಗಿ ಮಿಂಚಿದ್ದರು. ಇದೀಗ 'ಕರಾವಳಿ'ಯಲ್ಲಿ 'ಮಾವೀರ'ನಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಟ ಪ್ರಜ್ವಲ್ ದೇವರಾಜ್ ಕೂಡ ನಟಿಸಿದ್ದಾರೆ.
'ಒಂದು ಮೊಟ್ಟೆಯ ಕಥೆ''ಗರುಡ ಗಮನ ವೃಷಭ ವಾಹನ', 'ಸ್ವಾತಿ ಮುತ್ತಿನ ಮಳೆ ಹನಿಯೇ', 'ಟೋಬಿ', 'ಚಾರ್ಲಿ', 'ಟರ್ಬೊ' ಹೀಗೆ ಎಲ್ಲಾ ಸಿನಿಮಾಗಳಲ್ಲೂ ವಿಭಿನ್ನ ಪಾತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.