ADVERTISEMENT

Sandalwood: ಭಾರಿ ಕುತೂಹಲ ಮೂಡಿಸಿದ ‘ಕರಿಕಾಡ’ ಫೆಬ್ರುವರಿ 6ಕ್ಕೆ ತೆರೆಗೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜನವರಿ 2026, 9:55 IST
Last Updated 26 ಜನವರಿ 2026, 9:55 IST
<div class="paragraphs"><p>ನಟರಾಜ್  ಹಾಗೂ ನಿರೀಕ್ಷಾ ಶೆಟ್ಟಿ</p></div>

ನಟರಾಜ್ ಹಾಗೂ ನಿರೀಕ್ಷಾ ಶೆಟ್ಟಿ

   

ಕನ್ನಡ ಚಿತ್ರರಂಗದಲ್ಲಿ ಪ್ರಸ್ತುತವಾಗಿ ವಿಭಿನ್ನ ಶೀರ್ಷಿಕೆಯ ಸಿನಿಮಾಗಳು ಸದ್ದು ಮಾಡುತ್ತಿದೆ. ಆ ಸಾಲಿನಲ್ಲಿ ‘ಕರಿಕಾಡ’ ಎನ್ನುವ ಹೊಸ ಸಿನಿಮಾವು ಒಂದು. ಬಿಡುಗಡೆಗು ಮುನ್ನವೇ ಸಂಚಲನ ಮೂಡಿಸುತ್ತಿರುವ ಈ ಸಿನಿಮಾವು ಇದೀಗ ತೆರೆ ಮೇಲೆ ಬರಲು ಸಜ್ಜಾಗಿದೆ.

ಕಾಡ ನಟರಾಜ್ ನಾಯಕನಾಗಿ ಹಾಗೂ ನಿರೀಕ್ಷಾ ಶೆಟ್ಟಿ ನಾಯಕಿಯಾಗಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಸಿನಿಮಾದ ಹಾಡು ಕೇಳಿರುವ ಸಿನಿ ಪ್ರಿಯರು ಇಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿಯನ್ನು ಇಷ್ಟ ಪಟ್ಟಿದ್ದಾರೆ. ಹಾಗಾಗಿ ಎರಡು ನಟರ ನಟನೆಯ ಮೇಲೆ ನಿರೀಕ್ಷೆಗಳು ಹೆಚ್ಚಿದೆ. ಇನ್ನು, ಸಿನಿಮಾಗೇ ಗಿಲ್ಲಿ ವೆಂಕಟೇಶ್ ಅವರು ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾವನ್ನು ರಿದ್ದಿ ಎಂಟರ್ಟೈನ್ ಮೆಂಟ್ ಬ್ಯಾನರ್ ಅಡಿಯಲ್ಲಿ , ದೀಪ್ತಿ ದಾಮೋದರ್ ನಿರ್ಮಿಸಿದ್ದಾರೆ.

ADVERTISEMENT

ನಟರಾಜ್

ಐದು ಭಾಷೆಗಳಲ್ಲಿ ತೆರೆಗೆ

ಸದ್ಯಕ್ಕೆ ಸಿನಿಮಾ ರಂಗದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿದೆ. ಈ ಸಾಲಿನಲ್ಲಿ ಕರಿಕಾಡವು ಒಂದು. ಕನ್ನಡ ಸೇರಿ ಹಿಂದಿ, ತೆಲುಗು, ತಮಿಳ್ ಮತ್ತು ಮಲಯಾಳಂನಲ್ಲಿ ಫೆಬ್ರವರಿ 6ರಂದು ತೆರೆ ಕಾಣುತ್ತಿದೆ. ಈಗಾಗಲೇ ಚಿತ್ರದ ಟೀಸರ್ ಬಿಡುಗಡೆಯಾಗಿದೆ.

ಟೀಸರ್ ನೋಡಿದಾಗ ಇದು ಒಂದು ಅಡ್ವೆಂಚರಸ್ ಜೊತೆಗೆ ಪಕ್ಕ ಹಳ್ಳಿ ಸೊಗಡಿನ ಸಿನಿಮಾವೆಂದು ಕಾಣುತ್ತಿದೆ. ಒಂದು ಕಾಡಿನಲ್ಲಿ ನಡೆಯುವ ಕಥೆ. ದ್ವೇಷ, ಪ್ರತಿಕಾರ ಮತ್ತು ಪ್ರೀತಿ ಎಲ್ಲ ಭಾವನೆಗಳ ಮಿಶ್ರಣ ಎಂದು ತಿಳಿದು ಬರುತ್ತಿದೆ. ಹಾಗಾಗಿ ಟೀಸರ್ ಸಿನಿಮಾದ ಮೇಲಿನ ಕುತೂಹಲವನ್ನು ದುಪ್ಪಟ್ಟಾಗುವಂತೆ ಮಾಡಿದೆ.

ನಟರಾಜ್

ಸಿನಿಮಾಗೆ ಅತೀಶಯ ಜೈನ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆಯನ್ನು ಮಾಡಿದ್ದು, ಈಗಾಗಲೇ ಬಿಡುಗಡೆಯಾದ 'ರತುನಿ ರತುನಿ' ಮತ್ತು 'ಕಬ್ಬಿನ್ ಜಲ್ಲೆ' ಎನ್ನುವ ಎರಡು ಹಾಡುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಿನಿಮಾದ ಮೂರನೇ ಹಾಡು 'ನೀ ಯಾರೇ ನನಗೆ' ಜನವರಿ 28ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಒಂದು ರೀತಿಯಲ್ಲಿ ಹಲವಾರು ಹೊಸ ಪ್ರತಿಭೆಗಳಿರುವ ಈ ಸಿನಿಮಾ ಬಿಡುಗಡೆಗು ಮುನ್ನವೇ ಅಬ್ಬರಿಸುತ್ತಿದೆ. ಜೊತೆಗೆ ಸಿನಿಮಾದ ಕಥೆ ಹಾಗೂ ನಟನೆಯ ಬಗ್ಗೆ ಸಿನಿ ಪ್ರಿಯರಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.