
ಕಾವ್ಯಾ ಗೌಡ ಹಾಗೂ ಸೋಮಶೇಖರ್ ದಂಪತಿ
ಚಿತ್ರ: ಇನ್‌ಸ್ಟಾಗ್ರಾಂ
ಬೆಂಗಳೂರು: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟಿ ಕಾವ್ಯಾ ಗೌಡ-ಸೋಮಶೇಖರ್ ದಂಪತಿ ಹಾಗೂ ಪ್ರೇಮಾ- ನಂದೀಶ್ ದಂಪತಿ ರಾಮಮೂರ್ತಿನಗರ ಪೊಲೀಸ್ ಠಾಣೆಯ ಪೊಲೀಸರಿಗೆ ದೂರು- ಪ್ರತಿದೂರು ನೀಡಿದ್ದು, ಒಟ್ಟು ಎಂಟು ಮಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹಲ್ಲೆ, ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕಾವ್ಯಾ ಗೌಡ ದಂಪತಿ
ಸೋಮಶೇಖರ್ ಹಾಗೂ ನಂದೀಶ್ ಅವರು ಸಹೋದರರು. ತಂದೆ ಹಾಗೂ ತಾಯಿಯೊಂದಿಗೆ ಒಂದೇ ಮನೆಯಲ್ಲಿ ಅವರು ವಾಸ ಮಾಡುತ್ತಿದ್ದಾರೆ. ಸಹೋದರರು ಹಾಗೂ ಅವರ ಪತ್ನಿಯ ನಡುವೆ ಗಲಾಟೆ ನಡೆದು ಠಾಣೆಯ ಮೆಟ್ಟಿಲೇರಲಾಗಿದೆ.
ನಟಿ ಕಾವ್ಯಾ ಗೌಡ ಅವರ ಮೇಲೆ ಹಲ್ಲೆ ನಡೆಸಿದ್ದು, ಆಕೆಯ ಪತಿ ಸೋಮಶೇಖರ್ ಅವರಿಗೂ ಚಾಕುವಿನಿಂದ ಇರಿಯಲಾಗಿದೆ ಎಂದು ಕಾವ್ಯಾ ಅವರ ಸಹೋದರಿ ಭವ್ಯ ಗೌಡ ಅವರು ದೂರು ನೀಡಿದ್ದಾರೆ. ನಮ್ಮ ಮೇಲೂ ಹಲ್ಲೆ ನಡೆಸಿ ಮಾಂಗಲ್ಯ ಸರ ಕಸಿದುಕೊಳ್ಳಲಾಗಿತ್ತು ಎಂದು ಪ್ರೇಮಾ ಅವರು ದೂರು ನೀಡಿದ್ದಾರೆ. ಕಾವ್ಯಾ ಗೌಡ ಅವರು ಸೀತಾವಲ್ಲಭ, ಗಾಂಧಾರಿ, ರಾಧಾ ರಮಣ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ಮದುವೆ ಬಳಿಕ ನಟನೆಯಿಂದ ದೂರ ಉಳಿದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.