ADVERTISEMENT

KGF ಚಾಪ್ಟರ್ 2: ತಮಿಳುನಾಡಿನಲ್ಲಿ ₹100 ಕೋಟಿ ಗಳಿಸಿದ ಮೊದಲ ಕನ್ನಡ ಸಿನಿಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2022, 9:04 IST
Last Updated 2 ಮೇ 2022, 9:04 IST
ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2
ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 2   

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್–ಚಾಪ್ಟರ್ 2‘ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆಯತ್ತ ಮುನ್ನುಗುತ್ತಿದೆ.

ಅದರಲ್ಲೂ ಚಿತ್ರದ ಒಟ್ಟಾರೆ ಗಳಿಕೆ ₹1,000 ಕೋಟಿಗೂ ಹೆಚ್ಚಾಗಿದ್ದು, ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ಎಂದೇ ಬಣ್ಣಿಸಲಾಗುತ್ತದೆ.

ಅದರ ಜತೆಗೆ, ಹಿಂದಿಯಲ್ಲಿ ಬಾಲಿವುಡ್ ಚಿತ್ರಗಳ ಪೈಪೋಟಿ ಎದುರು, ಕೆಜಿಎಫ್ ಚಾಪ್ಟರ್ 2 ಚಿತ್ರ ₹300 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ADVERTISEMENT

ಈ ಪೈಕಿ, ಹೆಮ್ಮೆ ಪಡುವ ಸಂಗತಿಯೇನೆಂದರೆ, ಕನ್ನಡ ಚಿತ್ರವೊಂದು ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ₹100 ಕೋಟಿ ಗಳಿಸಿದೆ.

ಈ ಕುರಿತು ತಮಿಳುನಾಡಿನ ಬಾಕ್ಸ್ ಆಫೀಸ್ ವಾಣಿಜ್ಯ ವಿಶ್ಲೇಷಕ ಮನೋಬಾಲ ವಿಜಯಬಾಲನ್ ಅವರು ಭಾನುವಾರ ಟ್ವೀಟ್ ಮಾಡಿದ್ದಾರೆ.

ಪ್ರಶಾಂತ್ ನೀಲ್ ನಿರ್ದೇಶನದ ಚಿತ್ರ ಕೆಜಿಎಫ್–ಚಾಪ್ಟರ್ 2 ಏಪ್ರಿಲ್ 14ರಂದು ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.