ADVERTISEMENT

ಈಜುಕೊಳದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಕೆಜಿಎಫ್ ನಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2021, 6:53 IST
Last Updated 30 ಸೆಪ್ಟೆಂಬರ್ 2021, 6:53 IST
ನಟಿ ಮೌನಿ ರಾಯ್ ಹುಟ್ಟುಹಬ್ಬದ ಚಿತ್ರಗಳು ವೈರಲ್
ನಟಿ ಮೌನಿ ರಾಯ್ ಹುಟ್ಟುಹಬ್ಬದ ಚಿತ್ರಗಳು ವೈರಲ್   

ಬೆಂಗಳೂರು: ಕನ್ನಡದ ಜನಪ್ರಿಯ ಚಿತ್ರ ಕೆಜಿಎಫ್‌ನ ಹಿಂದಿ ಅವೃತ್ತಿಯಲ್ಲಿ ಕಾಣಿಸಿಕೊಂಡಿದ್ದ ನಟಿ ಮೌನಿ ರಾಯ್ ಹುಟ್ಟುಹಬ್ಬ ಆಚರಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ.

ಅದರಲ್ಲೂ ವಿಶೇಷವೇನೆಂದರೆ, ಮೌನಿ ಹುಟ್ಟುಹಬ್ಬ ಆಚರಿಸಿಕೊಂಡಿರುವುದು ಈಜುಕೊಳದಲ್ಲಿ..

ಹುಟ್ಟುಹಬ್ಬ ಆಚರಣೆಯ ಚಿತ್ರಗಳನ್ನು ನಟಿ ಮೌನಿ ರಾಯ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಅಲ್ಲದೆ, ಬಾಲಿವುಡ್ ನಟಿ ಮತ್ತು ನಿರೂಪಕಿ ಮಂದಿರಾ ಬೇಡಿ ಕೂಡ ಮೌನಿ ರಾಯ್‌ಗೆ ಹುಟ್ಟುಹಬ್ಬದ ಶುಭ ಕೋರಿ ಫೋಟೊಗಳನ್ನು ಪೋಸ್ಟ್ ಮಾಡಿದ್ದಾರೆ.

ಮೌನಿ, ಹಿಂದಿ ಕಿರುತೆರೆಯ ಕಸ್ತೂರಿ, ದೇವೋನ್ ಕೆ ದೇವ್, ಮಹಾದೇವ್ ಮತ್ತು ನಾಗಿನ್ ಧಾರಾವಾಹಿಗಳಲ್ಲೂ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.