ADVERTISEMENT

ಬರಲಿದ್ದಾನೆ ‘ಖಲ್ನಾಯಕ್‌ ರಿಟರ್ನ್ಸ್’: ಸೀಕ್ವೆಲ್‌ನಲ್ಲಿ ಇರಲಿದ್ದಾರೆ ಸಂಜಯ್‌ ದತ್

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 11:30 IST
Last Updated 26 ಫೆಬ್ರುವರಿ 2026, 11:30 IST
   

ಬಾಲಿವುಡ್‌ನ ಹಿಟ್‌ ಸಿನಿಮಾಗಳಲ್ಲಿ ಒಂದಾದ ಸಂಜಯ್‌ ದತ್‌ ನಟನೆಯ ‘ಖಲ್ನಾಯಕ್‌’ ಸಿನಿಮಾದ ಮುಂದುವರಿದ ಭಾಗ (ಸೀಕ್ವೆಲ್‌) ಬರಲಿದೆ.

ಆಸ್ಪೆಕ್ಟ್‌ ಗ್ಲೋಬಲ್‌ ವೆಂಚರ್ಸ್‌ನ ಭಾಗವಾದ ಆಸ್ಪೆಕ್ಟ್‌ ಪ್ರೊಡಕ್ಷನ್‌ ಸಂಸ್ಥೆಯು ‘ಖಲ್ನಾಯಕ್‌ ರಿಟರ್ನ್ಸ್‌’ನ ನಿರ್ಮಾಣ ಹಕ್ಕುಗಳನ್ನು ಅಧಿಕೃತವಾಗಿ ಪಡೆದಿದೆ. 1993ರಲ್ಲಿ ಬಿಡುಗಡೆಯಾದ ಸುಭಾಷ್‌ ಘಾಯ್‌ ನಿರ್ದೇಶನದ ‘ಖಲ್ನಾಯಕ್‌’ನಲ್ಲಿ ಸಂಜಯ್‌ ದತ್‌, ಜಾಕಿಶ್ರಾಫ್‌ ಮತ್ತು ಮಾಧುರಿ ದೀಕ್ಷಿತ್‌ ಮುಖ್ಯಭೂಮಿಕೆಯಲ್ಲಿದ್ದರು. ಸೀಕ್ವೆಲ್‌ನಲ್ಲಿ ಸಂಜಯ್‌ ದತ್‌ ಅವರು ನಟಿಸುವುದು ಖಚಿತವಾಗಿದೆ. ಸಿನಿಮಾವನ್ನು ಯಾರು ನಿರ್ದೇಶಿಸಲಿದ್ದಾರೆ, ಕಲಾವಿದರು ಹಾಗೂ ರಿಲೀಸ್‌ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವುದಾಗಿ ನಿರ್ಮಾಣ ಸಂಸ್ಥೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT