ADVERTISEMENT

ಮ್ಯಾಕ್ಸ್‌ ನಿರ್ದೇಶಕರಿಗೆ ಸುದೀಪ್‌ರಿಂದ ದುಬಾರಿ ಕಾರು ಉಡುಗೊರೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಸೆಪ್ಟೆಂಬರ್ 2025, 12:04 IST
Last Updated 25 ಸೆಪ್ಟೆಂಬರ್ 2025, 12:04 IST
<div class="paragraphs"><p>ನಿರ್ದೇಶಕ ವಿಜಯ್ ಕಾರ್ತಿಕೇಯ ಜೊತೆಗೆ ನಟ&nbsp;ಸುದೀಪ್</p></div>

ನಿರ್ದೇಶಕ ವಿಜಯ್ ಕಾರ್ತಿಕೇಯ ಜೊತೆಗೆ ನಟ ಸುದೀಪ್

   

ಚಿತ್ರ: @VKartikeyaa

ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಅವರು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ADVERTISEMENT

ದುಬಾರಿ ಬೆಲೆಯ ಕಾರು ಉಡುಗೊರೆ

ಮ್ಯಾಕ್ಸ್‌ ಮತ್ತು ಮಾರ್ಕ್ ಸಿನಿಮಾದ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ಕಿಚ್ಚ ಸುದೀಪ್‌ ಅವರು ಸ್ಕೋಡಾ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಸ್ಕೋಡಾ ಕುಶಾಕ್‌ ಕಾರು ಅದರ ಆವೃತ್ತಿಗೆ ಅನುಗುಣವಾಗಿ ಸುಮಾರು ₹13.19ರಿಂದ 22.87 ಲಕ್ಷದವರೆಗೆ ಇದೆ.

ಕಿಚ್ಚ ಸುದೀಪ್‌ ಅವರ ಜೊತೆಗೆ ಕ್ಲಿಕ್ಕಿಸಿಕೊಂಡ ಫೋಟೊವನ್ನು ನಿರ್ದೇಶಕ ವಿಜಯ್ ಕಾರ್ತಿಕೇಯ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂದ್ದಾರೆ. ಪೋಸ್ಟ್ ಜೊತೆಗೆ ನಿರ್ದೇಶಕ, ಕಿಚ್ಚ ಸುದೀಪ್ ಹಾಗೂ ಅವರ ಕುಟುಂಬಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಿಜಯ್ ಕಾರ್ತಿಕೇಯ ಅವರು ಕಳೆದ ವರ್ಷ ನಟ ಸುದೀಪ್ ಅವರ ಮ್ಯಾಕ್ಸ್ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಯಶಸ್ಸಿನ ಬಳಿಕ ಮಾರ್ಕ್ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ನಿರ್ದೇಶಕರ ಶ್ರಮಕ್ಕೆ ನಟ ಕಿಚ್ಚ ಸುದೀಪ್ ಅವರು ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.