ADVERTISEMENT

ನಾನು ಸಿನಿಮಾ ಮಾಡುತ್ತಿರುವುದೇಕೆ? ಕಾರಣ ತಿಳಿಸಿದ ಕಿಚ್ಚ ಸುದೀಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2026, 12:20 IST
Last Updated 1 ಜನವರಿ 2026, 12:20 IST
ಕಿಚ್ಚ ಸುದೀಪ್
ಕಿಚ್ಚ ಸುದೀಪ್    

ನಟ ಕಿಚ್ಚ ಸುದೀಪ್ ಅಭಿನಯದ ಮಾರ್ಕ್ ಸಿನಿಮಾ ಡಿ.25ರಂದು ಬಿಡುಗಡೆಯಾಗಿತ್ತು. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಇದೀಗ ಖುದ್ದು ಕಿಚ್ಚ ಸುದೀಪ್ ಅವರೇ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿ ಕಂಡು ಭಾವುಕರಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಜೊತೆಗೆ ನಾನು ಸಿನಿಮಾ ಮಾಡುತ್ತಿರುವುದೇಕೆ ಎಂಬುವುದರ ಬಗ್ಗೆ ಕಾರಣ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಅಭಿಮಾನಿಗಳು ಅವರ ಕಾರಿನ ಬಳಿ ಸುತ್ತುವರೆದ ಫೋಟೊವನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಕಿಚ್ಚ ಸುದೀಪ್ ಹೇಳಿದ್ದಿಷ್ಟು

ADVERTISEMENT

‘ನಿನ್ನೆ ಸಂತೋಷ್ (ಬೆಂಗಳೂರು) ಮತ್ತು ಸಂಗಮ್ (ಮೈಸೂರು) ಚಿತ್ರಮಂದಿರಕ್ಕೆ ಭೇಟಿ ನೀಡಿದ್ದೆ. ಆ ಕ್ಷಣ ನನ್ನನ್ನು ನಿಜಕ್ಕೂ ಭಾವುಕನನ್ನಾಗಿ ಮಾಡಿತು. ಕುಟುಂಬಗಳು, ಮಕ್ಕಳು, ಅಭಿಮಾನಿಗಳು ಅಷ್ಟೊಂದು ಪ್ರೀತಿ ತೋರಿಸಿದ್ದು, ಅವರುಗಳು ಸಂತೋಷದಿಂದ ಒಟ್ಟಿಗೆ ಸೇರಿದ್ದನ್ನು ನೋಡಿದಾಗ, ನಾನು ಸಿನಿಮಾಗಳನ್ನು ಏಕೆ ಮಾಡುತ್ತಿರುವೇ ಎಂಬುವುದಕ್ಕೆ ಕಾರಣ ಸಿಕ್ಕಿತು. ಮಾರ್ಕ್ ಚಿತ್ರಕ್ಕೆ ದೊಡ್ಡ ಯಶಸ್ಸನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು’.

‘ಈ ಪ್ರೀತಿ ಪ್ರತಿ ಜಿಲ್ಲೆ, ಪ್ರತಿ ತಾಲ್ಲೂಕು ಮತ್ತು ಕರ್ನಾಟಕದಾದ್ಯಂತ ವ್ಯಾಪಿಸಿರುವುದನ್ನು ನೋಡಿ ನನಗೆ ಸಂತೋಷವಾಯಿತು. ಚಿತ್ರಮಂದಿರಗಳ ಹೊರಗೆ ಸೇರಿದ್ದ ಜನಸಂದಣಿ, ಪ್ರತಿಯೊಂದು ಕೂಗು, ಜೈಕಾರ ನನ್ನನ್ನೂ ಹೆಮ್ಮೆ ಪಡುವಂತೆ ಮಾಡಿತು. ‘ಸೈಕೋ ಸೈತಾನ್’ ಮತ್ತು ‘ಮಸ್ತ್ ಮಲೈಕಾ’ ಹಾಡುಗಳು ನಿಮ್ಮ ಧ್ವನಿಯ ಮೂಲಕ ಜೀವಂತವಾಗಿರುವುದು ನನ್ನನ್ನು ಕೃತಜ್ಞತೆಯಿಂದ ತುಂಬುತ್ತದೆ. ಒಂದು ಸಣ್ಣ ಹೊಸ ವರ್ಷದ ಉಡುಗೊರೆಯಾಗಿ, ನಾವು ಇಂದು ಸಂಜೆ 4 ಗಂಟೆಗೆ ಸೈಕೋ ಸೈತಾನ್ ವಿಡಿಯೊ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ. ದಯವಿಟ್ಟು ವೀಕ್ಷಿಸಿ, ಹಂಚಿಕೊಳ್ಳಿ ಮತ್ತು ಪ್ರೀತಿ ಬರುತ್ತಲೇ ಇರಲಿ. ಇದು ನಿಮ್ಮೆಲ್ಲರನ್ನೂ ಮನರಂಜಿಸಲು ನನ್ನನ್ನು ಪ್ರೇರೇಪಿಸುತ್ತದೆ. ನಿಮ್ಮೆಲ್ಲರ ಕುಟುಂಬಗಳಲ್ಲಿ 2026ರ ಶುಭಾಶಯಗಳು’ ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.