
ಗೌರಿ ಆರ್ಟ್ಸ್ ಪ್ರೊಡಕ್ಷನ್‌ನ ಚೊಚ್ಚಲ ಸಿನಿಮಾದ ಶೀರ್ಷಿಕೆಯನ್ನು ನಟ ಸುದೀಪ್ ಇತ್ತೀಚೆಗೆ ಅನಾವರಣಗೊಳಿಸಿದರು. ಅಶ್ವಿನ್ ನಾಯಕನಾಗಿ ನಟಿಸುತ್ತಿರುವ ಈ ಸಿನಿಮಾಗೆ ‘ಸೆಲೆಬ್ರಿಟಿ’ ಎಂಬ ಹೆಸರು ಇಡಲಾಗಿದ್ದು, ಸಾ.ರಾ ಮಹೇಶ್ ಹಾಗೂ ಸುಷ್ಮಾ ಅಶ್ವಿನ್ ಇದನ್ನು ನಿರ್ಮಾಣ ಮಾಡುತ್ತಿದ್ದಾರೆ.
ಕಿರಣ್ ವಿಶ್ವನಾಥ್ ನಿರ್ದೇಶನದ ಈ ಸಿನಿಮಾದಲ್ಲಿ ನಾಯಕಿಯಾಗಿ ‘ಏಳುಮಲೆ’ ಖ್ಯಾತಿಯ ನಟಿ ಪ್ರಿಯಾಂಕಾ ಆಚಾರ್ ಅಭಿನಯಿಸುತ್ತಿದ್ದಾರೆ. ಶೀರ್ಷಿಕೆ ಬಿಡುಗಡೆಗೊಳಿಸಿ ಮಾತನಾಡಿದ ಸುದೀಪ್, ‘ಟೀಸರ್ ತಾಂತ್ರಿಕವಾಗಿ ಸುಂದರವಾಗಿದೆ. ವಿಜಯ್ ಸಂಗೀತ ಚೆನ್ನಾಗಿದೆ. ನಾಯಕ ಅಶ್ವಿನ್ ನೃತ್ಯ ಗಮನಸೆಳೆಯುವಂತಿದೆ. ಒಂದು ಸಿನಿಮಾ ಮಾಡುವುದು ಬಹಳ ಸುಲಭವಾದ ಕೆಲಸವಾದರೆ, ಅದು ಬೆಳೆಯಬೇಕು ಎಂದರೆ ಅದಕ್ಕೆ ಜನರ ಸಹಕಾರ ಬೇಕು’ ಎಂದರು.
ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ಸಂಗೀತ ನಿರ್ದೇಶನ ಮಾಡುತ್ತಿದ್ದು, ರವಿವರ್ಮಾ ಸಾಹಸ ನಿರ್ದೇಶನ, ಗುಣಕಲಾ ನಿರ್ದೇಶನವಿದೆ. ಅನಿರುದ್ಧ ಶಾಸ್ತ್ರೀ ಸಾಹಿತ್ಯ ಹಾಡುಗಳಿಗಿವೆ. ಜಾನಿ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.