ಮುಂಬೈ: ಬಾಲಿವುಡ್ ಹಾಸ್ಯನಟ ಕಪಿಲ್ ಶರ್ಮಾ ಅವರು ನಡೆಸಿ ಕೊಡುವ ಜನಪ್ರಿಯ ಕಾಮಿಡಿ ಕಾರ್ಯಕ್ರಮ ‘ದಿಕಪಿಲ್ ಶರ್ಮಾಶೋ’ನಲ್ಲಿ ನಟ ಕಿಚ್ಚ ಸುದೀಪ್ ಭಾಗವಹಿಸಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫೋಟೊಗಳು ವೈರಲ್ ಆಗಿದ್ದು, ಈ ಕುರಿತು ಸುದೀಪ್ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
‘ಕಪಿಲ್ ಶರ್ಮಾ ಶೋನಲ್ಲಿ ಅದ್ಭುತವಾದ ಸಂತೋಷದ ಕ್ಷಣಗಳನ್ನು ಕಳೆದೆ. ಅಲ್ಲಿ ಎಷ್ಟು ನಕ್ಕಿದ್ದೇನೆಂದುಹೇಳಲು ಸಾಧ್ಯವಿಲ್ಲ. ಈ ಮಟ್ಟಿಗೆ ನಾನು ಇದುವರೆಗೆ ನಕ್ಕಿದ್ದು ತೀರ ವಿರಳ.ಶರ್ಮಾ ತಂಡಕ್ಕೆ ಧನ್ಯವಾದ’ ಎಂದು ಟ್ವೀಟ್ ಮಾಡಿದ್ದಾರೆ. ಜತೆಗೆ, ಕಾರ್ಯಕ್ರಮದಲ್ಲಿದ್ದ ನವಜೋತ್ ಸಿಂಗ್ ಸಿಧು, ಸುನೀಲ್ ಶೆಟ್ಟಿ, ಕಪಿಲ್ ಶರ್ಮಾ ಇತರರೊಂದಿಗಿನ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.