ADVERTISEMENT

'ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ': ಸುದೀಪ್ ಟ್ವೀಟ್‌ಗೆ ಮಹಿಳೆಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 7:53 IST
Last Updated 21 ಸೆಪ್ಟೆಂಬರ್ 2019, 7:53 IST
   

ಬೆಂಗಳೂರು: ನಾವು ಹಾಗೂ ನನ್ನ ಸ್ನೇಹಿತರು ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ ಎಂಬ ಕಿಚ್ಚಸುದೀಪ್ ಟ್ವೀಟ್‌ಗೆ ನೆಟ್ಟಿಗರುಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಕೈಗೆ ಹಾಕಿರುವುದು ಕಡಗ, ಬಳೆ ಅಲ್ಲ ಎಂದರೇನು ಅರ್ಥ? ಈ ರೀತಿಯ ಸೆಕ್ಸಿಸ್ಟ್ ಹೇಳಿಕೆ ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ ಮಹಿಳೆಯರುಸುದೀಪ್ ಟ್ವೀಟ್‌ನ್ನು ಖಂಡಿಸಿದ್ದಾರೆ.

'ಬಳೆ ತೊಡುವ ಹೆಣ್ಣುಮಕ್ಕಳು ಎಷ್ಟೋ ವಿಷಯಗಳಲ್ಲಿ ಗಂಡಸರಿಗಿಂತ ಬಲಶಾಲಿಗಳಾಗಿರುತ್ತಾರೆ'

'ನಾವೇನು ಸೀರೆ ಉಟ್ಟಿಲ್ಲ, ಬಳೆ ತೊಟ್ಟಿಲ್ಲ, ಹೂ ಮುಡ್ಕೊಂಡಿಲ್ಲ '... ಇದನ್ನೇ ಆಂಗ್ಲ ಭಾಷೆಯಲ್ಲಿ 'ಸೆಕ್ಸಿಸ್ಟ್ ' ಅನ್ನೋದು..'

'ನಾವೇನು ಬಳೆ ತೊಟ್ಟುಕೊಂಡಿದ್ದೀವಾ' ಎನ್ನುವುದರ ಮೂಲಕ ಗಂಡು ಶ್ರೇಷ್ಠ, ಭಾರತೀಯ ಹೆಣ್ಣು ತೊಡುವ ಬಳೆ ದೌರ್ಬಲ್ಯದ, ಅಡುಗೆಮನೆಗೆ ಸೀಮಿತವಾದ ಸಂಕೇತ ಎಂದು ಧ್ವನಿಸುವುದನ್ನು ನೋಡಿದ್ದೇನೆ.

ಬಳೆ ಹಾಕ್ಕೊಂಡಿದಾರೆ ಅಂದ್ರೆ ಏನಂತೆ ಪ್ರಾಬ್ಲಮ್ಮು? ಬಳೆ ತೊಡೋರು ಹೆಣ್ಮಕ್ಳು, ಹೆಣ್ಮಕ್ಳು ವೀಕು ಅಂತಾನಾ?

ಬಳೆ ತೊಡುವ ಹೆಣ್ಣುಮಕ್ಕಳು ಎಷ್ಟೋ ವಿಷಯಗಳಲ್ಲಿ ಗಂಡಸರಿಗಿಂತ ಬಲಶಾಲಿಗಳಾಗಿರುತ್ತಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.