ADVERTISEMENT

Lakshmi Putra Movie: ಹೀಗಿದ್ದಾನೆ ನೋಡಿ ‘ಲಕ್ಷ್ಮೀಪುತ್ರ’

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 0:21 IST
Last Updated 1 ಜುಲೈ 2025, 0:21 IST
<div class="paragraphs"><p>ಚಿಕ್ಕಣ್ಣ</p></div>

ಚಿಕ್ಕಣ್ಣ

   

ನಿರ್ದೇಶಕ ಎ.ಪಿ.ಅರ್ಜುನ್ ತಮ್ಮದೇ ಎಪಿ ಅರ್ಜುನ್ ಫಿಲ್ಮ್ಸ್‌ನಡಿ ನಿರ್ಮಾಣ ಮಾಡುತ್ತಿರುವ, ಚಿಕ್ಕಣ್ಣ ಮುಖ್ಯಭೂಮಿಕೆಯಲ್ಲಿರುವ ‘ಲಕ್ಷ್ಮೀಪುತ್ರ’ ತೆರೆಗೆ ಬರಲು ಸಜ್ಜಾಗುತ್ತಿದೆ. ಇತ್ತೀಚೆಗೆ ಚಿತ್ರದ ಎರಡನೇ ಹಂತದ ಚಿತ್ರೀಕರಣ ಪೂರ್ಣಗೊಂಡಿತು.  

ಚಿಕ್ಕಣ್ಣ ಜನ್ಮದಿನದಂದು ‘ಲಕ್ಷ್ಮೀಪುತ್ರ’ನ ಅನಾವರಣವನ್ನು ಚಿತ್ರತಂಡ ಮಾಡಿದೆ. ತಾಯಿ ಮಗನ ಬಾಂಧವ್ಯಕ್ಕೆ ಸಂಬಂಧಿಸಿದ ಈ ಚಿತ್ರಕ್ಕೆ ಅರ್ಜುನ್ ಕಥೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ವಿಜಯ್‌ ಎಸ್‌.ಸ್ವಾಮಿ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ‘ಲಕ್ಷ್ಮೀಪುತ್ರ’ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ ಎರಡನೇ ಸಿನಿಮಾ. ಚಿಕ್ಕಣ್ಣ ಮಗನಾಗಿ ಹಾಗೂ ನಟಿ ತಾರಾ ತಾಯಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಗಿರೀಶ್ ಆರ್. ಗೌಡ ಛಾಯಾಚಿತ್ರಗ್ರಹಣ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. ಕೆ.ರವಿ ವರ್ಮಾ ಸಾಹಸ ನಿರ್ದೇಶನ, ಎಪಿ ಅರ್ಜುನ್, ಪ್ರಶಾಂತ್ ರಾಜಪ್ಪ ಹಾಗೂ ವಿಜಯ್ ಈಶ್ವರ್ ಸಂಭಾಷಣೆ ಬರೆದಿದ್ದಾರೆ. ಧರ್ಮಣ್ಣ ಕಡೂರ್ ಹಾಗೂ ಕುರಿ ಪ್ರತಾಪ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.