ADVERTISEMENT

ಟಾಲಿವುಡ್‌ನ ಬಹುನಿರೀಕ್ಷಿತ ‘ಲಕ್ಷ್ಮೀಸ್ ಎನ್‌ಟಿಆರ್’ ಮಾರ್ಚ್ 29ಕ್ಕೆ ತೆರೆಗೆ

ಕುತೂಹಲ ಕೆರಳಿಸಿದ ಟ್ರೇಲರ್‌

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 12:43 IST
Last Updated 27 ಮಾರ್ಚ್ 2019, 12:43 IST
'ಲಕ್ಷ್ಮೀಸ್ ಎನ್‌ಟಿಆರ್‌' ಚಿತ್ರದಲ್ಲಿ ಯಜ್ಞಾ ಶೆಟ್ಟಿ
'ಲಕ್ಷ್ಮೀಸ್ ಎನ್‌ಟಿಆರ್‌' ಚಿತ್ರದಲ್ಲಿ ಯಜ್ಞಾ ಶೆಟ್ಟಿ   

ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ‘ಲಕ್ಷ್ಮೀಸ್ ಎನ್‌ಟಿಆರ್’ ಸಿನಿಮಾಕ್ಕೆ ಕೊನೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಈ ಚಿತ್ರಕ್ಕೆಈಚೆಗಷ್ಟೇ ಸೆನ್ಸಾರ್ ಮಂಡಳಿ ‘ಯು’ಪ್ರಮಾಣಪತ್ರ ನೀಡಿದೆ.

ಸಿನಿಮಾದ ಬಿಡುಗಡೆಯ ದಿನಾಂಕ ಚುನಾವಣೆ ಅಧಿಸೂಚನೆಗೂ ಮುನ್ನವೇ ಘೋಷಣೆಯಾಗಿತ್ತು ಎಂದು ನಿರ್ಮಾಪಕ ರಾಕೇಶ್ ರೆಡ್ಡಿ ಚುನಾವಣಾ ಆಯೋಗಕ್ಕೆ ಮತ್ತು ಸೆನ್ಸಾರ್ ಮಂಡಳಿಗೆ ಮನವರಿಕೆ ಕೊಟ್ಟಿದ್ದಾರೆ ಎನ್ನಲಾಗಿದೆ. ಸಿನಿಮಾ ಮಾರ್ಚ್ 29ಕ್ಕೆ ತೆರೆ ಕಾಣಲಿದೆ.

ಆಂಧ್ರಪ್ರದೇಶದ ರಾಜಕಾರಣದಲ್ಲಿ ದಂತಕತೆಯಂತಿದ್ದ ನಟ ಎನ್.ಟಿ. ರಾಮ್‌ರಾವ್ ಅವರ ಜೀವನಾಧಾರಿತ ಚಿತ್ರ ಇದಾಗಿದೆ. ಆದರೆ, ಇಡೀ ಸಿನಿಮಾ ಎನ್‌ಟಿಆರ್ ಅವರ ಎರಡನೇ ಪತ್ನಿ ಶಿವಪಾರ್ವತಿ ಅವರು ಕಂಡಂತೆ ಚಿತ್ರೀಕರಿಸಲಾಗಿದೆ ಎನ್ನುವ ಗಾಳಿಸುದ್ದಿಗಳೂ ಇವೆ. ಈಗಾಗಲೇ ಚಿತ್ರದ ಟ್ರೈಲರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರೇಕ್ಷಕರ ಕುತೂಹಲ ಕೆರಳಿಸಿದೆ.

ADVERTISEMENT

ಲಕ್ಷ್ಮೀಪಾರ್ವತಿ ಪಾತ್ರದಲ್ಲಿ ಕನ್ನಡತಿ ಯಜ್ಞಾಶೆಟ್ಟಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.