
ನಟಿ ಅನುಪಮಾ ಪರಮೇಶ್ವರನ್ ನಟನೆಯ 'ಲಾಕ್‌ಡೌನ್' ಚಿತ್ರವು ಡಿಸೆಂಬರ್ 5ರಂದು ಬಿಡುಗಡೆಯಾಗಲಿದೆ. ಚಿತ್ರತಂಡ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡು, ‘ಭಯ ಹಾಗೂ ಬದುಕುಳಿಯುವಿಕೆಯ ಕಥೆ’ ಎಂದು ಬರೆದುಕೊಂಡಿದೆ.
ಕಳೆದ ಜೂನ್‌ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಡಿಸೆಂಬರ್‌ಗೆ ಮುಂದೂಡಲಾಗಿತ್ತು.
2019-20ರ ವೇಳೆಗೆ ಇಡೀ ವಿಶ್ವಕ್ಕೆ ಕೊರೊನಾ ವೈರಸ್ ಆವರಿಸಿತ್ತು. ಆ ಸಮಯದಲ್ಲಿ ವೃದ್ಧರು, ಮಕ್ಕಳು ಸೇರಿದಂತೆ ಲಕ್ಷಕ್ಕೂ ಅಧಿಕ ಜನ ವೈರಸ್‌ಗೆ ಬಲಿಯಾಗಿದ್ದರು.
ಆ ಸಂದರ್ಭದಲ್ಲಿ ಸಂಭವಿಸಿದ ಸಾವು– ನೋವುಗಳನ್ನು ಕುರಿತ ಚಿತ್ರ ಇದಾಗಿದೆ. 'ಲಾಕ್‌ಡೌನ್' ಚಿತ್ರವು ನೈಜ್ಯ ಕಥೆಯನ್ನು ಆಧಾರಿಸಿದೆ ಎಂದು ಚಿತ್ರತಂಡ ಹೇಳಿದೆ.
ಎ.ಆರ್. ಜೀನಾ ನಿರ್ದೇಶಿಸಿದ್ದರೆ, ಕೆ.ಎ. ಶಕ್ತಿವೇಲ್ ಛಾಯಾಗ್ರಹಣ, ಸಿದ್ಧಾರ್ಥ್ ವಿಪಿನ್ ಹಾಗೂ ಎನ್‌ಆರ್ ರಘುನಂತನ್ ಸಂಗೀತ ಸಂಯೋಜಿಸಿದ್ದಾರೆ.
ಕನ್ನಡದಲ್ಲಿ ನಟ ಪುನೀತ್ ರಾಜ್‌ಕುಮಾರ್ ನಟನೆಯ ‘ನಟಸಾರ್ವಭೌಮ‘ ಚಿತ್ರದಲ್ಲಿ ನಟಿ ಅನುಪಮಾ ಪರಮೇಶ್ವರನ್ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.