ADVERTISEMENT

ಮಧುಬಾಲಾ 86ನೇ ಹುಟ್ಟುಹಬ್ಬಕ್ಕೆ ಗೂಗಲ್‌ ಡೂಡಲ್‌ ಗೌರವ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2019, 5:31 IST
Last Updated 14 ಫೆಬ್ರುವರಿ 2019, 5:31 IST
   

ಮುಂಬೈ: ಬಾಲಿವುಡ್‌ನ ಎವರ್‌ಗ್ರೀನ್ ನಾಯಕಿ ಮಧುಬಾಲಾ ಅವರ 86ನೇ ಹುಟ್ಟುಹಬ್ಬದ ಅಂಗವಾಗಿ ಗೂಗಲ್ ಸಂಸ್ಥೆ ವಿಶೇಷವಾದ ಡೂಡಲ್‌ ಪ್ರಕಟಿಸುವ ಮೂಲಕ ತನ್ನ ಗೌರವ ಸಲ್ಲಿಸಿದೆ. ​

ಹಿಂದಿ ಚಿತ್ರರಂಗದ ಹಳೆಯ ನಾಯಕಿಯರಲ್ಲಿ ಮಧುಬಾಲಾ ಅಪ್ರತಿಮ ಸುಂದರಿ ಎಂದೇ ಖ್ಯಾತಿ ಗಳಿಸಿದ್ದಾರೆ.

‘ಬರ್‌ಸಾತ್ ಕಿ ರಾತ್’, ‘ಮೊಘಲ್‌ ಏ ಅಜಂ’ ನಂತಹ ಅನೇಕ ಚಿತ್ರಗಳಲ್ಲಿ ನಟಿಸಿ, ಹಿಂದಿ ಚಿತ್ರರಂಗದಲ್ಲಿ ಅಚ್ಚಳಿಯದೇ ಉಳಿದ ನಟಿ ಮಧುಬಾಲಾ. ಅಪ್ರತಿಮ ಸುಂದರಿಯಾಗಿಯೂ ಮಧುಬಾಲಾ ರಸಿಕರ ಮನಗೆದ್ದಿದ್ದರು. ತಮ್ಮ ಮೋಹಕ ನೋಟ, ನಟನಾ ಸಾಮರ್ಥ್ಯ, ನೃತ್ಯದಿಂದ 1942ರಿಂದ 1962ರವರೆಗೆ ಬಹುಬೇಡಿಕೆಯ ನಟಿಯಾಗಿ ಜಗತ್ತಿನ ಗಮನ ಸೆಳೆದವರು ಇವರು. ಇವರ ನಟನೆಯ ‘ಪ್ಯಾರ್‌ ಕಿಯಾ ತೋ ಡರ್‌ನಾ ಕ್ಯಾ’ ಹಾಡಂತೂ ಇಂದಿಗೂ ಹಲವರ ಅಚ್ಚುಮೆಚ್ಚಿನ ಹಾಡು.

ADVERTISEMENT

36ರ ಹರೆಯದಲ್ಲಿ ಸಾವನ್ನಪ್ಪಿದ ಮಧುಬಾಲಾ, ‘ಚಲ್ತಿ ಕಾ ನಾಮ್ ಗಾಡಿ’, ಮುಘಲ್ ಎ ಆಜಮ್’ನಂತಹ ಚಿತ್ರಗಳಿಂದ ಬೆಳ್ಳಿತೆರೆಯಲ್ಲಿ ಇತಿಹಾಸ ಬರೆದವರು.

ಕಡಿಮೆ ಅವಧಿಯಲ್ಲಿಯೇ ಮಿಂಚಿದ ಮಧುಬಾಲಾ ಸಣ್ಣ ವಯಸ್ಸಲ್ಲೇ ಸಾವನ್ನಪ್ಪಿದ್ದು ದುರಂತ.

2017ರ ಆಗಸ್ಟ್‌ನಲ್ಲಿ ದೆಹಲಿಯ ಮೇಡಮ್ ಟುಸ್ಸಾಡ್ಸ್‌ನಲ್ಲಿ ಮಧುಬಾಲಾರ ಮೇಣದ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.