ADVERTISEMENT

‘ಮಾ ಬೆಹೆನ್’ನಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಮಾಧುರಿ ದೀಕ್ಷಿತ್

ಪಿಟಿಐ
Published 4 ಫೆಬ್ರುವರಿ 2026, 9:22 IST
Last Updated 4 ಫೆಬ್ರುವರಿ 2026, 9:22 IST
<div class="paragraphs"><p>&nbsp;ಮಾಧುರಿ ದೀಕ್ಷಿತ್</p></div>

 ಮಾಧುರಿ ದೀಕ್ಷಿತ್

   

ನೆಟ್‌ಫ್ಲಿಕ್ಸ್‌ನ ಮುಂಬರುವ ಕಾಮಿಡಿ ಥ್ರಿಲ್ಲರ್ ‘ಮಾ ಬೆಹೆನ್’ ಸಿನಿಮಾದಲ್ಲಿ ಬಾಲಿವುಡ್‌ನ ತಾರೆಯರಾದ ಮಾಧುರಿ ದೀಕ್ಷಿತ್, ‌ತೃಪ್ತಿ ಧಿಮ್ರಿ ಹಾಗೂ ರವಿ ಕಿಶನ್ ನಟಿಸಲಿದ್ಧಾರೆ.

ಖ್ಯಾತ ನಿರ್ದೇಶಕ ಸುರೇಶ್ ತ್ರಿವೇಣಿ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಚಿತ್ರಕಥೆಯನ್ನು ಪೂಜಾ ತೋಲಾನಿ ಬರೆದಿದ್ದಾರೆ. ‘ಅಬುಂಡಾಂಟಿಯಾ ಎಂಟರ್‌ಟೈನ್‌ಮೆಂಟ್ ಬ್ಯಾನರ್‌’ ಅಡಿ ವಿಕ್ರಮ್ ಮಲ್ಹೋತ್ರಾ ಹಾಗೂ ಓಪನಿಂಗ್ ಇಮೇಜ್ ಫಿಲ್ಮ್ಸ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎಂದು ನೆಟ್‌ಫ್ಲಿಕ್ಸ್ ತಿಳಿಸಿದೆ.

ADVERTISEMENT

ಸಿನಿಮಾದ ಟೀಸರ್‌ ಅನ್ನು ನೆಟ್‌ಫ್ಲಿಕ್ಸ್‌ನ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಬಿಡುಗಡೆಗೊಳಿಸಲಾಗಿದೆ.

ಮಾಧುರಿ ದೀಕ್ಷಿತ್‌

ಸಿನಿಮಾ ಕುರಿತು ಮಾಧುರಿ ದೀಕ್ಷಿತ್‌ ಮಾತನಾಡಿ, ‘ನಾನು ನಿರ್ದೇಶಕ ಸುರೇಶ್‌ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ. ಅವರು ನನ್ನ ಬಳಿ ಸಿನಿಮಾದ ಕಥೆ ಹೇಳಿದಾಗ ನಟಿಸಲು ಒಪ್ಪಿಕೊಂಡೆ. ಹಾಸ್ಯ ಪಾತ್ರದಲ್ಲಿ ನಟಿಸಿ ಬಹಳ ದಿನವಾಗಿತ್ತು’ ಎಂದು ಹೇಳಿದ್ದಾರೆ.

ಮಾ ಬೆಹೆನ್‌ ಚಿತ್ರಕಥೆಯು ರೇಖಾ ಮತ್ತು ಅವರ ಇಬ್ಬರು ಹೆಣ್ಣುಮಕ್ಕಳಾದ ಜಯಾ ಮತ್ತು ಸುಷ್ಮಾ ಅವರ ಸುತ್ತ ಸುತ್ತುತ್ತದೆ. ಸಿನಿಮಾ ಅನಿರೀಕ್ಷಿತ ಘಟನೆಗಳಿಂದ ಕೂಡಿದ್ದು, ಧರ್ನಾ ದುರ್ಗಾ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.