ADVERTISEMENT

ಪತಿಯೊಂದಿಗೆ ಜಪಾನ್‌ಗೆ ತೆರಳಿದ ಮಾಧುರಿ ದೀಕ್ಷಿತ್: ಕಿಮೋನೊ ಉಟ್ಟು ಗಮನಸೆಳೆದ ನಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2026, 5:33 IST
Last Updated 22 ಫೆಬ್ರುವರಿ 2026, 5:33 IST
<div class="paragraphs"><p>ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್  ಪತಿ ಡಾ. ಶ್ರೀರಾಮ್ ನೆನೆ  ಅವರೊಂದಿಗೆ ಜಪಾನ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಸುಂದರ ಕ್ಷಣಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.</p></div>

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಪತಿ ಡಾ. ಶ್ರೀರಾಮ್ ನೆನೆ ಅವರೊಂದಿಗೆ ಜಪಾನ್ ಪ್ರವಾಸದಲ್ಲಿದ್ದಾರೆ. ಈ ಪ್ರವಾಸದ ಸುಂದರ ಕ್ಷಣಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

   

ಚಿತ್ರ: ಇನ್‌ಸ್ಟಾಗ್ರಾಂ

ಮಾಧುರಿ ಪತಿಯೊಂದಿಗೆ ಜಪಾನ್‌ನ ಪ್ರಸಿದ್ಧ 'ಮೌಂಟ್ ಫ್ಯೂಜಿ' ಎದುರು ನಿಂತು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ADVERTISEMENT

ಫ್ಯೂಜಿ: ಸಂಪ್ರದಾಯ, ದೇವಾಲಯಗಳು, ಹಿಮ ಮತ್ತು ಸಮುರಾಯ್‌ಗಳಿಂದ ಕೂಡಿದ ಸಕ್ರಿಯ ಜ್ವಾಲಾಮುಖಿಯ ಒಂದು ನೋಟ ಎಂದು ಫೋಟೊಗೆ ಒಕ್ಕಣೆಯಲ್ಲಿ ಬರೆದುಕೊಂಡಿದ್ದಾರೆ.

ಮಾಧುರಿ ದಂಪತಿ ಜಪಾನ್‌ನಲ್ಲಿ ಹಿಮದ ಸೌಂದರ್ಯವನ್ನು ಆನಂದಿಸುತ್ತಾ, ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.

ಜಪಾನ್‌ನ ಸಾಂಪ್ರದಾಯಿಕ ಉಡುಗೆಯಾದ ಕಿಮೋನೊ ಧರಿಸಿ ಮಿಂಚಿದ್ದಾರೆ. ಮಾಧುರಿ ಅವರು ಕೇಸರಿ ಬಣ್ಣದ ಪ್ರಿಂಟೆಡ್ ಕಿಮೋನೊ ಧರಿಸಿದ್ದು, ಅವರ ಪತಿ ಜಪಾನಿನ ಸಮುರಾಯ್ ಉಡುಗೆ ತೊಟ್ಟು, ಕೈಯಲ್ಲಿ ಖಡ್ಗ ಹಿಡಿದು ಪೋಸ್ ನೀಡಿದ್ದಾರೆ.

ಮಾಧುರಿ ದೀಕ್ಷಿತ್ ಹಂಚಿಕೊಂಡ ಫೋಟೊಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ರೊಮ್ಯಾಂಟಿಕ್ ಕಪಲ್‌ ಎಂದು ಕಮೆಂಟ್ ಮಾಡಿದ್ದಾರೆ.

ವೃತ್ತಿಯಲ್ಲಿ ವೈದ್ಯರಾಗಿರುವ ಶ್ರೀರಾಮ್ ನೆನೆ ಅವರನ್ನು ಮಾಧುರಿ ಅವರು 1999ರಲ್ಲಿ ಮದುವೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.