
ಮೊನಾಲಿಸಾ
ಚಿತ್ರ: ಯ್ಯೂಟೂಬ್
2025ರಲ್ಲಿ ನಡೆದ ಮಹಾಕುಂಭ ಮೇಳದಿಂದ ಗಾಜುಗಣ್ಣಿನ ಹುಡುಗಿ ಮೊನಾಲಿಸಾ ಅವರ ಅದೃಷ್ಟವೇ ಬದಲಾಗಿದೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿದ್ದ ಮಹಾಕುಂಭ ಮೇಳದಲ್ಲಿ ಮೊನಾಲಿಸಾ ಯೂಟ್ಯೂಬರ್ ಒಬ್ಬರ ಕಣ್ಣಿಗೆ ಬಿದಿದ್ದರು. ತಮ್ಮ ನೀಲಿ ಕಣ್ಣುಗಳಿಂದಲೇ ಎಲ್ಲರ ಗಮನ ಸೆಳೆದು, ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಪ್ರಖ್ಯಾತಿ ಪಡೆದುಕೊಂಡರು.
ಮಹಾಕುಂಭ ಮೇಳದಲ್ಲಿ ತನ್ನ ಸುಂದರ ಕಣ್ಣಿನಿಂದ ಗಮನ ಸೆಳೆದು ಬಾಲಿವುಡ್‌ಗೆ ಕಾಲಿಟ್ಟಿದ್ದ 16 ವರ್ಷದ ಮೊನಾಲಿಸಾ ರೊಮ್ಯಾಂಟಿಕ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮೊನಾಲಿಸಾ ಹಾಗೂ ಸ್ಮಾರ್ತ್ ಮೆಹ್ತಾ ಅಭಿನಯಿಸಿರುವ ʻದಿಲ್ ಜಾನಿಯಾʼ ರೊಮ್ಯಾಂಟಿಕ್ ಆಲ್ಬಂ ಹಾಡು ಬಿಡುಗಡೆಯಾಗಿದೆ.
ಮೊನಾಲಿಸಾ
ಇದೇ ಹಾಡಿನಲ್ಲಿ ನಟ ಸಮರ್ಥ್ ಮೆಹ್ತಾ ಜೊತೆಗೆ ಮೊನಾಲಿಸಾ ಹೆಜ್ಜೆ ಹಾಕಿದ್ದು, ಅಭಿಮಾನಿಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಹನಿಮನಿ ಪ್ರೊಡಕ್ಷನ್ ಹೌಸ್ ನಿರ್ಮಾಣದ ಈ ಗೀತೆಯನ್ನು ರಿಥಮ್ ಸಂಧ್ಯಾ ನಿರ್ದೇಶನ ಮಾಡಿದ್ದಾರೆ. ರಾಜಾ ಹರ್ಭಜನ್ ಸಿಂಗ್ ಸಂಗೀತ ಸಂಯೋಜಕರಾಗಿದ್ದು, ಗಗನ್‌ದೀಪ್ ಸಾಹಿತ್ಯ ಬರೆದಿದ್ದಾರೆ.
ವೀನಸ್ ಓರಿಜಿನಲ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ʻದಿಲ್ ಜಾನಿಯಾʼ ಹಾಡು ಬಿಡುಗಡೆಯಾಗಿದೆ. ಇಷ್ಟೇ ಅಲ್ಲದೆ ಬಾಲಿವುಡ್‌ನ ಸಿನಿಮಾವೊಂದರಲ್ಲೂ ಮೊನಾಲಿಸಾಗೆ ನಟಿಸುವ ಅವಕಾಶ ಸಿಕ್ಕಿದೆ. ಕಳೆದ ವರ್ಷದಿಂದ ಅವರು ʻದಿ ಮಣಿಪುರ ಡೈರಿʼ ಸಿನಿಮಾದ ಚಿತ್ರೀಕರಣದಲ್ಲಿ ಸಕ್ರಿಯಾಗಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.