ADVERTISEMENT

ಮಹೇಶ್ ಬಾಬು ಅಭಿನಯದ ‘ಸರ್ಕಾರು ವಾರಿ ಪಾಟ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ನವೆಂಬರ್ 2021, 11:28 IST
Last Updated 3 ನವೆಂಬರ್ 2021, 11:28 IST
‘ಸರ್ಕಾರು ವಾರಿ ಪಾಟ’ ಚಿತ್ರದ ಮೋಷನ್ ಪೋಸ್ಟರ್
‘ಸರ್ಕಾರು ವಾರಿ ಪಾಟ’ ಚಿತ್ರದ ಮೋಷನ್ ಪೋಸ್ಟರ್   

ಬೆಂಗಳೂರು:ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಬಹು ನಿರೀಕ್ಷಿತ ‘ಸರ್ಕಾರು ವಾರಿ ಪಾಟ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಚಿತ್ರತಂಡ ದೀಪಾವಳಿ ಪ್ರಯುಕ್ತ ಈ ವಿಷಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಮುಂದಿನ ವರ್ಷ ಏಪ್ರೀಲ್ 1 ರಂದು ಚಿತ್ರಮಂದಿರಗಳಲ್ಲಿ ‘ಸರ್ಕಾರು ವಾರಿ ಪಾಟ’ ಬಿಡುಗಡೆಯಾಗಲಿದೆ.

ತಮ್ಮ 45ನೇ ವರ್ಷದ ಹುಟ್ಟುಹಬ್ಬದಂದು (ಆ.9) ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳನ್ನು ಖುಷಿಪಡಿಸಿದ್ದ ಮಹೇಶ್‌ ಬಾಬು ಕೆಲ ದಿನದ ನಂತರ ಸಿನಿಮಾದ ಫಸ್ಟ್‌ಲುಕ್ ಪೋಸ್ಟರ್ ಬಿಡುಗಡೆ ಮಾಡಿ ಬರುವ ವರ್ಷ ಜೊತೆಯಾಗೋಣ ಎಂದು ಬರೆದುಕೊಂಡಿದ್ದರು. ಈ ಮೊದಲು ‘ಸರ್ಕಾರು ವಾರಿ ಪಾಟ’ 2022ರ ಜನವರಿ 13ರಂದು ತೆರೆಗೆ ಬರಲಿದೆ ಎನ್ನಲಾಗಿತ್ತು.

ADVERTISEMENT

ಕೊರೊನಾ ಕಾರಣದಿಂದಾಗಿ ಚಿತ್ರೀಕರಣ ದೀರ್ಘಕಾಲ ಮುಂದೂಡಲ್ಪಟ್ಟಿತ್ತು. ಈಗಾಗಲೇಎರಡೂ ಹಂತದ ಶೂಟಿಂಗ್‌ ಮಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.

‘ಸರ್ಕಾರು ವಾರಿ ಪಾಟ’ ಸಿನಿಮಾಕ್ಕೆ ಗೀತಾ ಗೋವಿಂದಂ ಖ್ಯಾತಿಯ ಪರಶುರಾಮ್‌ ಅವರ ಚಿತ್ರಕಥೆ, ನಿರ್ದೇಶನವಿದೆ. ಈ ಸಿನಿಮಾವನ್ನು ಮೈತ್ರಿ ಮೂಮಿ ಮೇಕರ್ಸ್‌ನವರು ನಿರ್ಮಾಣ ಮಾಡುತ್ತಿದ್ದಾರೆ. ಎಸ್ಎಸ್ ತಮನ್ ಸಂಗೀತ ನಿರ್ದೇಶನವಿದೆ. ಮಹೇಶ್‌ ಬಾಬುಗೆ ಜೋಡಿಯಾಗಿಕೀರ್ತಿ ಸುರೇಶ್‌ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.