ADVERTISEMENT

ಜಾಕ್ವೆಲಿನ್ ಫೆರ್ನಾಂಡಿಸ್ ಭೇಟಿ ಮಾಡಿದ ಮನಿಕೆ ಮಗೆ ಹಿತೆ ಖ್ಯಾತಿಯ ಯೋಹನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಅಕ್ಟೋಬರ್ 2021, 9:02 IST
Last Updated 8 ಅಕ್ಟೋಬರ್ 2021, 9:02 IST
ಯೋಹನಿ-ಜಾಕ್ವೆಲಿನ್ ಭೇಟಿಯ ಫೋಟೊ ವೈರಲ್
ಯೋಹನಿ-ಜಾಕ್ವೆಲಿನ್ ಭೇಟಿಯ ಫೋಟೊ ವೈರಲ್   

ಬೆಂಗಳೂರು: ಮನಿಕೆ ಮಗೆ ಹಿತೆ ಶ್ರೀಲಂಕಾ ಹಾಡಿನ ಮೂಲಕ ಜನಪ್ರಿಯತೆ ಗಳಿಸಿರುವ ಗಾಯಕಿ ಯೋಹನಿ, ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ಅವರನ್ನು ಭೇಟಿ ಮಾಡಿದ್ದಾರೆ.

ಜಾಕ್ವೆಲಿನ್ ಫೆರ್ನಾಂಡಿಸ್ ಅವರು ಮಾಜಿ ಮಿಸ್ ಶ್ರೀಲಂಕಾ ಆಗಿದ್ದು, ಬಾಲಿವುಡ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದಾರೆ.

ಗಾಯಕಿ ಯೋಹನಿ ಅವರು ಮನಿಕೆ ಮಗೆ ಹಿತೆ ಕವರ್ ಹಾಡಿನ ಮೂಲಕ ಇಂಟರ್‌ನೆಟ್‌ ಸ್ಟಾರ್ ಅನ್ನಿಸಿಕೊಂಡಿದ್ದಾರೆ.

ADVERTISEMENT

ಅಲ್ಲದೆ, ಇಬ್ಬರೂ ಶ್ರೀಲಂಕಾ ಮೂಲದವರಾಗಿದ್ದು, ಭಾರತದಲ್ಲಿ ಅಪಾರ ಪ್ರಸಿದ್ಧಿ ಪಡೆದಿದ್ದಾರೆ.

ಜಾಕ್ವೆಲಿನ್ ಜತೆಗಿನ ಫೋಟೊ ಅನ್ನು ಯೋಹನಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೊಗೆ ನಟಿ ಜಾಕ್ವೆಲಿನ್ ಕಮೆಂಟ್ ಮಾಡಿದ್ದು, ನಿನ್ನ ಬಗ್ಗೆ ಹೆಮ್ಮೆಯಿಸುತ್ತಿದೆ ಎಂದಿದ್ದಾರೆ.

ಯೋಹನಿ ಗಾಯನವನ್ನು ಪ್ರಿಯಾಂಕಾಚೋಪ್ರಾ ಸಹಿತ ಅನೇಕ ಸೆಲೆಬ್ರಿಟಿಗಳು ಮೆಚ್ಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.