ADVERTISEMENT

ಮನೋರಂಜನ್‌ ರವಿಚಂದ್ರನ್‌ ನಟನೆಯ ಹೊಸ ಸಿನಿಮಾಗೆ ಬೃಂದಾ ಜೋಡಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 0:14 IST
Last Updated 12 ಆಗಸ್ಟ್ 2025, 0:14 IST
ಮನೋರಂಜನ್‌, ಬೃಂದಾ ಆಚಾರ್ಯ
ಮನೋರಂಜನ್‌, ಬೃಂದಾ ಆಚಾರ್ಯ   

ನಟ ಮನೋರಂಜನ್‌ ರವಿಚಂದ್ರನ್‌ ನಟನೆಯ ಹೊಸ ಸಿನಿಮಾ ಸೆಟ್ಟೇರಿದೆ. ಇತ್ತೀಚೆಗೆ ಚಿತ್ರದ ಮುಹೂರ್ತ ನಡೆದಿದ್ದು, ಮನೋರಂಜನ್‌ಗೆ ಜೋಡಿಯಾಗಿ ‘ಪ್ರೇಮಂ ಪೂಜ್ಯಂ’, ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಖ್ಯಾತಿಯ ಬೃಂದಾ ಆಚಾರ್ಯ ನಟಿಸಲಿದ್ದಾರೆ. 

‘ಸಾಹೇಬ’, ಮುಗಿಲ್‌ಪೇಟೆ’ ಸಿನಿಮಾಗಳಲ್ಲಿ ನಟಿಸಿದ ಮನೋರಂಜನ್ ಅವರ ಐದನೇ ಸಿನಿಮಾ ಇದಾಗಿದೆ. ಮನೋರಂಜನ್‌ ಹೊಸ ಹೆಜ್ಜೆಗೆ ಸಹೋದರ ವಿಕ್ರಮ್ ರವಿಚಂದ್ರನ್ ಸಾಥ್ ಕೊಟ್ಟಿದ್ದು, ಸಿನಿಮಾಗೆ ಕ್ಲ್ಯಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ರುದ್ರೇಶ್ ನಿರ್ದೇಶನದ ಈ ಸಿನಿಮಾದಲ್ಲಿ ನಟಿ ಅನುಷಾ ರೈ ವಿಶೇಷ ಪಾತ್ರದಲ್ಲಿ ಇರಲಿದ್ದಾರೆ. ಒಂದೊಳ್ಳೆಯ ಕಾಂಟೆಂಟ್ ಇರುವ ಕಮರ್ಷಿಯಲ್‌ ಸಿನಿಮಾ ಇದಾಗಿದೆ ಎಂದು ಚಿತ್ರತಂಡ ತಿಳಿಸಿದೆ. 

ವೈಎಸ್ ಪ್ರೊಡಕ್ಷನ್‌ನಡಿ ಶ್ರೀನಿವಾಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ, ಸೆಲ್ವಂ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ ಸಿನಿಮಾಗಿರಲಿದೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗಲಿದ್ದು, ಮೊದಲ ಹಂತದ ಶೂಟಿಂಗ್‌ ಬೆಂಗಳೂರಿನಲ್ಲಿ ನಡೆಯಲಿದೆ. ಬಳಿಕ ಬಾದಾಮಿಯತ್ತ ತಂಡ ಹೊರಡಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.