
ಮಗಳು ಹಾಗೂ ಪತಿಯೊಂದಿಗಿರುವ ಚಿತ್ರಗಳನ್ನು ನಟಿ ಮಾನ್ಯ ನಾಯ್ಡು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಚಂದನವನದಿಂದ ದೂರ ಇರುವ ನಟಿ ಈಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ಚಿತ್ರ: ಇನ್‌ಸ್ಟಾಗ್ರಾಂ
ಡಾ ವಿಷ್ಣುವರ್ಧನ್ ಜೊತೆ ‘ವರ್ಷ’, ದರ್ಶನ್ ಜೊತೆ ‘ಶಾಸ್ತ್ರಿ’, ಶ್ರೀಮುರಳಿ ಜೊತೆ ‘ಶಂಭು’ ಸೇರಿ ಕನ್ನಡದಲ್ಲಿ ಅನೇಕ ಚಿತ್ರಗಳಲ್ಲಿ ಅಭಿನಯಿಸಿರುವ ಮಾನ್ಯ ನಾಯ್ಡು ಅವರು ಸಂಭ್ರಮದಲ್ಲಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲೂ ಪ್ರಖ್ಯಾತಿ ಪಡೆದುಕೊಂಡಿರುವ ಮಾನ್ಯ ನಾಯ್ಡು 2010ರ ಬಳಿಕ ಚಿತ್ರರಂಗ ತೊರೆದು ವಿದೇಶದಲ್ಲಿ ನೆಲೆಸಿದ್ದಾರೆ.
ಬಣ್ಣದ ಲೋಕದಿಂದ ದೂರ ಸರಿದಿರುವ ನಟಿ ಮಾನ್ಯ ನಾಯ್ಡು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಅಮೆರಿಕದಲ್ಲಿದ್ದರೂ ಕೆಲವು ಚಂದನವನದ ತಾರೆಯರ ಜೊತೆಗೆ ಉತ್ತಮ ಸ್ನೇಹ ಬಾಂಧವ್ಯ ಹೊಂದಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಆಗಾಗ ಸಾಮಾಜಿಕ ಮಾಧ್ಯಮದಲ್ಲಿ ನಟ ಶ್ರೀಮುರಳಿ, ದರ್ಶನ್ ಸೇರಿದಂತೆ ಹಲವಾರು ನಟ, ನಟಿಯರ ಫೋಟೊಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಇತ್ತೀಚೆಗೆ ನಟಿ ಮಾನ್ಯ ಅವರು ತಮ್ಮ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.
ನಟಿ ಮಾನ್ಯ ಅವರು ತಮ್ಮ ಮಗಳಾದ ಒಮಿಷ್ಕಾಳ 10ನೇ ವರ್ಷದ ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಜೊತೆಗೆ ‘ನೀನು ನನ್ನ ಮಗಳಾಗಿರುವುದಕ್ಕೆ ನಾನು ತುಂಬಾ ಧನ್ಯಳು. ಸುಂದರ, ಕಾಳಜಿಯುಳ್ಳ ಮಗಳನ್ನು ಪಡೆದ ಜಗತ್ತಿನ ಅತ್ಯಂತ ಅದೃಷ್ಟಶಾಲಿ ತಾಯಿಯಾಗಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.
ಒಮಿಷ್ಕಾಳ 10ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ತೆಗೆದ ಫೋಟೊಗಳನ್ನು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ನಟಿ ಮಾನ್ಯ ಅವರು ಹಂಚಿಕೊಂಡಿದ್ದಾರೆ. ಮಗಳು ಹಾಗೂ ಪತಿಯ ಜೊತೆಗೆ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು, ಹುಟ್ಟುಹಬ್ಬಕ್ಕೆ ಬಂದಿದ್ದ ಎಲ್ಲಾ ಅತಿಥಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಇನ್ನು, ಒಂದೇ ಫ್ರೇಮ್‌ನಲ್ಲಿ ಮುದ್ದಾದ ಕುಟುಂಬವನ್ನು ನೋಡಿದ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಮೆಂಟ್‌ಗಳ ಮೂಲಕ ಶುಭ ಹಾರೈಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.