ADVERTISEMENT

ಮರಾಠಿ ನಟ ಪ್ರದೀಪ್​ ಪಟವರ್ಧನ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಆಗಸ್ಟ್ 2022, 10:04 IST
Last Updated 9 ಆಗಸ್ಟ್ 2022, 10:04 IST
ಪ್ರದೀಪ್​ ಪಟವರ್ಧನ್
ಪ್ರದೀಪ್​ ಪಟವರ್ಧನ್   

ಮುಂಬೈ: ಮರಾಠಿ ಚಿತ್ರರಂಗದ ಹಿರಿಯ ನಟಪ್ರದೀಪ್ ಪಟವರ್ಧನ್ ಮಂಗಳವಾರ ನಿಧನರಾದರು. ಅವರಿಗೆ64 ವರ್ಷ ವಯಸ್ಸಾಗಿತ್ತು.

ಇಲ್ಲಿನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದಪ್ರದೀಪ್ ಪಟವರ್ಧನ್ ನಿಧನರಾದರು ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಪ್ರದೀಪ್ ಪಟವರ್ಧನ್ ನಿಧನಕ್ಕೆಇಡೀ ಮರಾಠಿ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಅವರ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ADVERTISEMENT

ಮಹಾರಾಷ್ಟ್ರ ಮುಖ್ಯಮಂತ್ರಿಏಕನಾಥ್ ಶಿಂಧೆ ಅವರು ಟ್ವೀಟ್‌ ಮಾಡಿಪ್ರದೀಪ್ ಪಟವರ್ಧನ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ರಂಗಭೂಮಿ ಹಿನ್ನೆಲೆಯಿಂದ ಬಂದಿದ್ದ ಪ್ರದೀಪ್ ಪಟವರ್ಧನ್ ಪ್ರತಿಭಾವಂತ ಕಲಾವಿದರಾಗಿದ್ದರು. ಮರಾಠಿ ಸಿನಿಮಾಗಳು, ಕಿರುತೆರೆ, ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದರು. ಅವರು ಬಾಲಿವುಡ್ ಸಿನಿಮಾಗಳಿಗೂ ಬಣ್ಣ ಹಚ್ಚಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.