ADVERTISEMENT

Matinee Kannada Movie | ‘ಮ್ಯಾಟ್ನಿ’ ಚಿತ್ರದ ಮೊದಲ ಹಾಡು ಜುಲೈ 21ಕ್ಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2023, 0:46 IST
Last Updated 19 ಜುಲೈ 2023, 0:46 IST
ನೀನಾಸಂ ಸತೀಶ್‌ ಹಾಗೂ ರಚಿತಾ ರಾಮ್‌ 
ನೀನಾಸಂ ಸತೀಶ್‌ ಹಾಗೂ ರಚಿತಾ ರಾಮ್‌    

‘ಅಯೋಗ್ಯ’ ಸಿನಿಮಾ ಮೂಲಕ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ನೀನಾಸಂ ಸತೀಶ್‌ ಹಾಗೂ ರಚಿತಾ ರಾಮ್‌ ಜೋಡಿಯ ಹೊಸ ಸಿನಿಮಾ ‘ಮ್ಯಾಟ್ನಿ’ ಬಿಡುಗಡೆಗೆ ಸಜ್ಜಾಗುತ್ತಿದೆ. 

ಚಿತ್ರದ ಮೊದಲ ಹಾಡು ಜುಲೈ 21ರಂದು ಸಂಜೆ ಬಿಡುಗಡೆಯಾಗಲಿದೆ. ‘ಇದೊಂದು ಪ್ರೇಮಗೀತೆ. ಅಯೋಗ್ಯ ನಂತರ ನನ್ನ ಹಾಗೂ ರಚಿತಾ ಅವರ ಜೋಡಿ ಮತ್ತೆ ನಿಮ್ಮ ಮನ ಗೆಲ್ಲುವ ನಂಬಿಕೆಯಿದೆ’ ಎಂದಿದ್ದಾರೆ ಸತೀಶ್‌. 2020ರಲ್ಲಿ ಈ ಸಿನಿಮಾ ಸೆಟ್ಟೇರಿತ್ತು. ಕಳೆದ ಫೆಬ್ರುವರಿಯಲ್ಲಿ ಚಿತ್ರದ ಚಿತ್ರೀಕರಣ ಅಂತಿಮ ಹಂತ ತಲುಪಿತ್ತು. ಚಿತ್ರತಂಡ ಕುಲು–ಮನಾಲಿಯಲ್ಲಿ ಹಾಡೊಂದನ್ನು ಚಿತ್ರೀಕರಿಸಿ ಈ ಘೋಷಣೆ ಮಾಡಿತ್ತು. ಚಿತ್ರದಲ್ಲಿ ಇಬ್ಬರು ನಾಯಕಿಯರಿರಲಿದ್ದು, ರಚಿತಾ ರಾಮ್‌ ಜೊತೆಗೆ ಅದಿತಿ ಪ್ರಭುದೇವ ಅವರೂ ಸತೀಶ್‌ಗೆ ಜೋಡಿಯಾಗಿದ್ದಾರೆ. 

ಮನೋಹರ್‌ ಕಾಂಪಲ್ಲಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ಈ ಚಿತ್ರವನ್ನು ಪಾರ್ವತಿ ಎಸ್‌.ಗೌಡ ನಿರ್ಮಾಣ ಮಾಡಿದ್ದಾರೆ. ನಟರಾದ ನಾಗಭೂಷಣ್‌, ಪೂರ್ಣ, ಶಿವರಾಜ್‌ ಕೆ.ಆರ್‌.ಪೇಟೆ ಮತ್ತಿತರರು ಚಿತ್ರದ ತಾರಾಗಣದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಚಿತ್ರಕ್ಕಿದೆ. ‘ಮ್ಯಾಟ್ನಿ’ ಜೊತೆಗೆ ತಮ್ಮ ಮುಂದಿನ ಪ್ಯಾನ್‌ ಇಂಡಿಯಾ ಸಿನಿಮಾ ‘ಅಶೋಕ ಬ್ಲೇಡ್‌’ ಬಗ್ಗೆಯೂ ಸತೀಶ್‌ ಅವರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಕಾಣುತ್ತಿದೆ.  

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.