ADVERTISEMENT

ಪ್ರೇಮಿಗಳ ದಿನದಂದು ಮಗುವಿನ ಮೊದಲ ಫೋಟೊ ಹಂಚಿಕೊಂಡ ಮೇಘನಾರಾಜ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 13:15 IST
Last Updated 14 ಫೆಬ್ರುವರಿ 2021, 13:15 IST
ಮಗುವಿನ ಫೋಟೊ ಹಂಚಿಕೊಂಡ ಮೇಘನಾ
ಮಗುವಿನ ಫೋಟೊ ಹಂಚಿಕೊಂಡ ಮೇಘನಾ   

ಸ್ಯಾಂಡಲ್‌ವುಡ್‌ ನಟಿ ಮೇಘನಾ ರಾಜ್ ತಮ್ಮ ಮಗುವಿನ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪ್ರೇಮಿಗಳ ದಿನವಾದ ಇಂದು ಮಗುವಿನೊಂದಿಗಿರುವ ವಿಡಿಯೊವನ್ನು ಹಂಚಿಕೊಂಡು ಅಭಿಮಾನಿಗಳನ್ನು ಸಂತಸಪಡಿಸಿದ್ದಾರೆ. ಆ ಮೂಲಕ ಇದೇ ಮೊದಲ ಬಾರಿಗೆ ಮಗುವಿನ ಮುಖವನ್ನು ಜಗತ್ತಿಗೆ ತೋರಿಸಿದ್ದಾರೆ.

ದಿವಂಗತ ನಟ ಚಿರು ಸರ್ಜಾ ಹಾಗೂ ಮೇಘನಾ ರಾಜ್ ಅವರ ಪುತ್ರನನ್ನು ಚಿಂಟು, ಜೂನಿಯರ್‌, ಜೂನಿಯರ್‌ ಸಿ, ಸಿಂಬ ಎಂದೆಲ್ಲಾ ಅಭಿಮಾನಿಗಳು, ಕುಟುಂಬದವರು ಹಾಗೂ ಆಪ್ತ ಸ್ನೇಹಿತ ಬಳಗದಿಂದ ಕರೆಯುತ್ತಿದ್ದಾರೆ. ಆದರೆ ಯಾರೂ ಇಲ್ಲಿಯವರೆಗೆ ಮಗುವಿನ ಫೋಟೊವನ್ನು ಹಂಚಿಕೊಂಡಿರಲಿಲ್ಲ.

ಮೇಘನಾ ಅವರ ಮಗು ಹುಟ್ಟಿದ ಮೊದಲ ದಿನದ ಘೋಟೊ ವೈರಲ್ ಆಗಿತ್ತು. ಅಂದಿನಿಂದ ಇಂದಿನವರೆಗೆ ಮಗುವಿನ ಯಾವುದೇ ಫೋಟೊವನ್ನು ಆಕೆಯೂ ಹಂಚಿಕೊಂಡಿರಲಿಲ್ಲ. ‘ನನ್ನ ಮಗನ ಫೋಟೊವನ್ನು ಹಂಚಿಕೊಳ್ಳಲು ಪ್ರೇಮಿಗಳ ದಿನವೇ ಸೂಕ್ತ ಎಂದು ನನಗೆ ಅನ್ನಿಸಿತ್ತು’ ಎಂದಿದ್ದಾರೆ ಮೇಘನಾ. ಮಗುವಿನ ಹೆಸರಿನ ಬಗ್ಗೆ ಮಾತನಾಡಿರುವ ಮೇಘನಾ ‘ಯಾವ ಅಕ್ಷರದಿಂದ ಮಗುವಿನ ಹೆಸರು ಆರಂಭವಾಗಬೇಕು ಎಂಬ ಬಗ್ಗೆ ಈಗಾಗಲೇ ಜೋತಿಷ್ಯರು ಕೆಲವೊಂದು ಹೆಸರುಗಳನ್ನು ಸೂಚಿಸಿದ್ದಾರೆ. ಆದರೆ ಹೆಸರು ಇಲ್ಲಿಯವರೆಗೆ ಅಂತಿಮವಾಗಿಲ್ಲ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.