ADVERTISEMENT

ಅಮ್ಮನಾಗುತ್ತಿರುವ ಖುಷಿಯೊಂದಿಗೆ ಮೆಟ್ ಗಾಲಾದಲ್ಲಿ ಹೆಜ್ಜೆ ಹಾಕಿದ ನಟಿ ಕಿಯಾರಾ

ಪಿಟಿಐ
Published 6 ಮೇ 2025, 5:01 IST
Last Updated 6 ಮೇ 2025, 5:01 IST
<div class="paragraphs"><p>ಕಿಯಾರಾ ಅಡ್ವಾಣಿ</p></div>

ಕಿಯಾರಾ ಅಡ್ವಾಣಿ

   

ಪಿಟಿಐ ಚಿತ್ರ

ನವದೆಹಲಿ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಜತೆ ಮೆಟ್ ಗಾಲಾ ಪ್ಯಾಷನ್‌ ಶೋದಲ್ಲಿ ಮೊದಲ ಬಾರಿ ಹೆಜ್ಜೆ ಹಾಕಿದ್ದಾರೆ.

ADVERTISEMENT

‘ನಟಿಯಾಗಿ ಮತ್ತು ಅಮ್ಮನಾಗುತ್ತಿರುವ ಈ ಸಂದರ್ಭದಲ್ಲಿ ಮೆಟ್‌ ಗಾಲಾದಲ್ಲಿ ಪಾಲ್ಗೊಳ್ಳುತ್ತಿರುವುದು ಹೆಚ್ಚು ಖುಷಿ ನೀಡಿದೆ’ ಎಂದು ಕಿಯಾರಾ ಹೇಳಿದ್ದಾರೆ.

‘ಬ್ರೇವ್‌ ಹಾರ್ಟ್‌’ ಸೂಚಿಸುವ ಗೌರವ್‌ ಗುಪ್ತಾ ಅವರು ನನ್ನ ಉಡುಗೆಯನ್ನು ವಿನ್ಯಾಸಗೊಳಿಸಿದ್ದಾರೆ. ಬದುಕಿನ ಹೊಸ ಪುಟ ತೆರೆದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಅದನ್ನು ಗೌರವಿಸುವ ಸಂದೇಶವನ್ನು ಉಡುಗೆ ಸಾರುತ್ತದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ಈ ಬಾರಿ ಮೆಟ್‌ಗಾಲಾದ ಥೀಮ್‌ ‘Superfine: Tailoring Black Style’ ಎನ್ನುವುದಾಗಿದೆ. ಮಾನಸಿಕವಾಗಿ, ದೈಹಿಕವಾಗಿ ಮತ್ತು ಹೊಸ ಪೀಳಿಗೆಯ ಬದಲಾವಣೆಯ ಈ ಸಮಯದಲ್ಲಿ ಬ್ರೇವ್‌ ಹಾರ್ಟ್ಸ್‌ ಸಂಕೇತ ಉತ್ತಮ ಆಯ್ಕೆಯಾಗಿದೆ ಎಂದು ವಸ್ತ್ರ ವಿನ್ಯಾಸಕಾರ ಗೌರವ್‌ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.