ADVERTISEMENT

‘ಲೂಸಿಫರ್‌ ಮಾಸ’!

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 20:00 IST
Last Updated 4 ಮಾರ್ಚ್ 2019, 20:00 IST
ಲೂಸಿಫರ್‌ನಲ್ಲಿ ಮೋಹನ್‌ಲಾಲ್‌
ಲೂಸಿಫರ್‌ನಲ್ಲಿ ಮೋಹನ್‌ಲಾಲ್‌   

ಮಾಲಿವುಡ್‌ನ ಸೂಪರ್‌ಸ್ಟಾರ್‌ಮೋಹನ್‌ಲಾಲ್‌ ಅಭಿನಯದ ರಾಜಕೀಯ ಥ್ರಿಲ್ಲರ್‌ ಸಿನಿಮಾ ‘ಲೂಸಿಫರ್‌’ ಇದೇ ತಿಂಗಳು ಬಿಡುಗಡೆಯಾಗುವುದು ಖಚಿತವಾಗಿದೆ. ಟ್ವಿಟರ್‌ನಲ್ಲಿ ಲೂಸಿಫರ್‌ ಪ‍ರ ಒಂದು ವಿಶಿಷ್ಟ ಪ್ರಚಾರ ಅಭಿಯಾನ ನಡೆಯುತ್ತಿದೆ.

‘ಮಾರ್ಚಿಂಗ್‌ಲೂಸಿಫರ್‌ಮಂತ್‌’ ಎಂಬಹ್ಯಾಶ್‌ಟ್ಯಾಗ್‌ನೊಂದಿಗೆ ಈ ಅಭಿಯಾನ ನಡೆಯುತ್ತಿದೆ!

ಬಹುನಿರೀಕ್ಷಿತ ಸಿನಿಮಾವೊಂದಕ್ಕೆ ಈ ಬಗೆಯ ಪ್ರಚಾರ ಅಭಿಯಾನ ಸಾಮಾಜಿಕ ಮಾಧ್ಯಮದಲ್ಲಿ ನಡೆದಿರುವುದು ವಿರಳ. ನಿರ್ದೇಶಕ ಪೃಥ್ವಿರಾಜ್‌ ಚಿತ್ರದ ಕಥಾವಸ್ತು ಮತ್ತು ಇಡೀ ತಾರಾಗಣದ ಬಗ್ಗೆ ಆರಂಭದಿಂದಲೂ ರಹಸ್ಯ ಕಾಪಾಡಿಕೊಂಡು ಬಂದಿದ್ದರು. ಪೋಸ್ಟರ್ ಮತ್ತು ಟ್ರೇಲರ್‌ನಲ್ಲೂ ಮೋಹನ್‌ಲಾಲ್‌ ಅವರನ್ನೇ ಹೆಚ್ಚು ಕೇಂದ್ರೀಕರಿಸಲಾಗಿತ್ತು. ಕಳೆದ ವಾರವಷ್ಟೇ ಆದಿಲ್‌ ಇಬ್ರಾಹಿಂ ಚಿತ್ರತಂಡಕ್ಕೆ ಸೇರ್ಪಡೆಯಾದ ಸುದ್ದಿಯನ್ನು ಪೋಸ್ಟರ್‌ ಮೂಲಕವೇ ಹಂಚಿಕೊಂಡಿತ್ತು. ಚಿತ್ರ ಬಿಡುಗಡೆಗೂ ಮೊದಲು ಕೊನೆಯ ಟ್ರೇಲರ್‌ ಕೊಡುವ ಚಿಂತನೆ ಪೃಥ್ವಿರಾಜ್‌ಗೆ ಇದೆಯಂತೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.