ADVERTISEMENT

ರೈತರ ಬೆಂಬಲಿಸಿದ ಗ್ರೇಟಾಗೆ ರಮ್ಯಾ ಹೊಗಳಿಕೆ: ಬಾಲಿವುಡ್‌ ಮಂದಿಗೆ ತಿವಿತ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2021, 12:20 IST
Last Updated 5 ಫೆಬ್ರುವರಿ 2021, 12:20 IST
ಮಾಜಿ ಸಂಸದೆ, ನಟಿ ರಮ್ಯಾ ಮತ್ತು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌
ಮಾಜಿ ಸಂಸದೆ, ನಟಿ ರಮ್ಯಾ ಮತ್ತು ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌    

ಬೆಂಗಳೂರು: ಭಾರತದಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ಸ್ವೀಡನ್‌ನ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್‌ ಮಾಡಿದ್ದ ಟ್ವೀಟ್‌ ಮತ್ತು ಅವರ ನಿಲುವನ್ನು ನಟಿ, ಮಾಜಿ ಸಂಸದೆ ರಮ್ಯಾ ಅವರು ಪ್ರಶಂಸಿಸಿದ್ದಾರೆ.

ಎಂಥದ್ದೇ ದ್ವೇಷ, ಬೆದರಿಗೆ, ಮಾನವ ಹಕ್ಕು ಉಲ್ಲಂಘನೆಯಾದರೂ, ಭಾರತದ ರೈತರ ಹೋರಾಟದ ಪರವಾಗಿ ನಾನು ನಿಲ್ಲುತ್ತೇನೆ ಎಂದು ಗ್ರೇಟಾ ಥನ್‌ಬರ್ಗ್‌ ಹೇಳಿದ್ದರು.

ಗ್ರೇಟಾ ಅವರ ಟ್ವೀಟ್‌ ಅನ್ನು ರೀಟ್ವೀಟ್‌ ಮಾಡಿರುವ ರಮ್ಯಾ, ' More spine than most of Bollywood! ಬಾಲಿವುಡ್‌ನ ಬಹುತೇಕರಿಗಿಂತಲೂ ಹೆಚ್ಚು ಬೆನ್ನೆಲುಬಿದೆ (ಧೈರ್ಯವಿದೆ),' ಎಂಬರ್ಥದಲ್ಲಿ ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಕ್ರಿಕೆಟರ್‌ಗಳಿಗೆ ಈ ಧೈರ್ಯ ಇದೆಯೇ ಎಂದು ಹಲವರು ಅದೇ ಟ್ವೀಟ್‌ನಲ್ಲಿ ಕಮೆಂಟ್‌ ಮಾಡಿ ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಮ್ಯಾ, 'ಇಬ್ಬರೂ ಒಂದೇ. ಇಬ್ಬರೂ ನಟಿಸುತ್ತಾರೆ. ಕಡಿಮೆ ಕ್ರಿಕೆಟ್‌... ಹೆಚ್ಚು ನಟನೆ,' ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.