ADVERTISEMENT

ಎಂಆರ್‌ಪಿ ಕಥೆವ್ಯಥೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 12:48 IST
Last Updated 2 ಆಗಸ್ಟ್ 2019, 12:48 IST
ಹರಿ
ಹರಿ   

‘ಎಂಆರ್‌ಪಿ’ ಹೆಸರಿನಡಿ ಎಲ್ಲೆಂದರಲ್ಲಿ ಮದ್ಯದ ಅಂಗಡಿಗಳು ತಲೆಎತ್ತಿವೆ. ಈಗ ಇದೇ ಹೆಸರಿನ ಚಿತ್ರವೊಂದು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ.

ಜವಾಬ್ದಾರಿ ವ್ಯಕ್ತಿಯೊಬ್ಬ ಬದುಕಿನಲ್ಲಿ ತಾನು ಅಂದುಕೊಂಡಿದ್ದನ್ನು ಹೇಗೆ ಸಾಧಿಸುತ್ತಾನೆ ಎಂಬುದೇ ‘ಎಂಆರ್‌ಪಿ’ ಚಿತ್ರದ ಕಥಾಹಂದರ. ನಿರ್ದೇಶಕ ಎಂ.ಡಿ. ಶ್ರೀಧರ್ ಅವರ ಶಿಷ್ಯ ಬಾಹುಬಲಿ ಈ ಸಿನಿಮಾ ನಿರ್ದೇಶಿಸಿದ್ದಾರೆ. ಕಥೆ ಮತ್ತು ಚಿತ್ರಕಥೆಯ ನೊಗವನ್ನೂ ಅವರೇ ಹೊತ್ತಿದ್ದಾರೆ.

ನಿರ್ದೇಶಕ ಮತ್ತು ನಟ ಶಿವಮಣಿ ಅವರ ಸೋದರ ಹರಿ ಇದರ ನಾಯಕ. 38 ಚಿತ್ರಗಳಲ್ಲಿ ನಟಿಸಿರುವ ಅನುಭವ ಅವರಿಗೆ ಇದೆ. ಮೊದಲ ಬಾರಿಗೆ ನಾಯಕ ನಟನಾಗಿ ಬಣ್ಣ ಹಚ್ಚುತ್ತಿರುವ ಖುಷಿ ಅವರದು.

ADVERTISEMENT

‘ರಗಡ್‍’ದಲ್ಲಿ ನಟಿಸಿದ್ದ ಚೈತ್ರಾ ರೆಡ್ಡಿ ಇದರ ನಾಯಕಿ. ಈಕೆಯ ಅ‍ಪ್ಪನಾಗಿ ಬಲರಾಜವಾಡಿ ಬಣ್ಣ ಹಚ್ಚಿದ್ದಾರೆ. ಎಂಆರ್‌ಪಿಯಾಗಿ ಎಲ್ಲರಿಗೂ ಒಳಿತಾಗಲಿ ಎಂದು ಏನೋ ಮಾಡಲು ಹೋದಾಗ ಅವಾಂತರಗಳ ಸುಳಿಗೆ ಸಿಲುಕುವ ಪಾತ್ರದಲ್ಲಿ ವಿಜಯ್‍ ಚೆಂಡೂರ್ ನಗೆಯುಕ್ಕಿಸಲಿದ್ದಾರಂತೆ.

ಹರ್ಷವರ್ಧನ್‍ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಗುಂಡ್ಲುಪೇಟೆ ಸುರೇಶ್ ಅವರದು. ಬೆಂಗಳೂರಿನ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ. ಬಾಕಿ ಇರುವ ಒಂದು ಹಾಡನ್ನು ಶೀಘ್ರವೇ ಚಿತ್ರೀಕರಿಸಲು ಚಿತ್ರತಂಡ ಯೋಜನೆ ರೂಪಿಸಿದೆ.

ಹಿರಿಯ ನಿರ್ದೇಶಕ ಎಂ.ಡಿ. ಶ್ರೀಧರ್, ಛಾಯಾಗ್ರಾಹಕ ಎ.ವಿ. ಕೃಷ್ಣಕುಮಾರ್(ಕೆಕೆ), ಕಾರ್ಯಕಾರಿ ನಿರ್ಮಾಪಕ ರಂಗಸ್ವಾಮಿ ಕೆ.ಆರ್. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇವರೊಟ್ಟಿಗೆ ‘ನನ್ ಮಗಳೇ ಹೀರೋಯಿನ್‍’ ಚಿತ್ರದ ಪಾಲುದಾರರಾಗಿದ್ದ ಎನ್.ಜಿ. ಮೋಹನ್‍ಕುಮಾರ್ ಕೂಡ ಕೈ ಜೋಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.