ADVERTISEMENT

ಅಲ್ಲು ಅರ್ಜುನ್‌ ಜೊತೆ ನಟಿಸುವಾಸೆ: ನಟಿ ಮೃಣಾಲ್‌ ಠಾಕೂರ್‌ 

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 23:56 IST
Last Updated 23 ಫೆಬ್ರುವರಿ 2026, 23:56 IST
<div class="paragraphs"><p>ಮೃಣಾಲ್‌ ಠಾಕೂರ್‌&nbsp;</p></div>

ಮೃಣಾಲ್‌ ಠಾಕೂರ್‌ 

   

ಸದ್ಯ ಬಾಲಿವುಡ್‌ ಹಾಗೂ ಟಾಲಿವುಡ್‌ನಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುವ ನಟಿ ಮೃಣಾಲ್‌ ಠಾಕೂರ್‌ ನಟ ಅಲ್ಲು ಅರ್ಜುನ್‌ ಅವರೊಂದಿಗೆ ಸಿನಿಮಾ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ. 

ಈ ಬಗ್ಗೆ ‘ಪಿಟಿಐ’ ಜೊತೆಗಿನ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಅಲ್ಲು ಅರ್ಜುನ್‌ ಹಾಗೂ ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ‘ಎಎ26Xಎಎ6’ ಸಿನಿಮಾದಲ್ಲಿ ಮೃಣಾಲ್‌ ನಟಿಸಲಿದ್ದಾರೆ ಎನ್ನುವ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ನಾನು ಖಂಡಿತವಾಗಿಯೂ ಈ ಸಿನಿಮಾದ ಭಾಗವಾಗಲು ಬಯಸುತ್ತೇನೆ. ಈ ಬಗ್ಗೆ ನಿರೀಕ್ಷೆಯಲ್ಲಿದ್ದೇನೆ. ‘ಪುಷ್ಪ’ ಸಿನಿಮಾ ಸರಣಿ ಹಾಗೂ ಅಲ್ಲು ಅರ್ಜುನ್‌ ಅವರ ಉಳಿದ ಸಿನಿಮಾಗಳನ್ನು ನೋಡಿದ ಬಳಿಕ ಅವರ ದೊಡ್ಡ ಅಭಿಮಾನಿಯಾಗಿದ್ದೇನೆ’ ಎಂದಿದ್ದಾರೆ. 

ADVERTISEMENT

‘ನಾನು ಹಿಂದಿ ಹಾಗೂ ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರಿಸಲಿದ್ದೇನೆ. ತಮಿಳಿನಲ್ಲೂ ನಾನು ಸಿನಿಮಾ ಮಾಡುತ್ತೇನೆ. ಕೆಲವು ಕುತೂಹಲಕಾರಿ ಕಥೆಗಳನ್ನು ಕೇಳಿದ್ದೇನೆ’ ಎನ್ನುತ್ತಾರೆ ಮೃಣಾಲ್‌. 

2022ರಲ್ಲಿ ‘ಸೀತಾ ರಾಮಂ’ ಸಿನಿಮಾ ಮೂಲಕ ತೆಲುಗಿನಲ್ಲಿ ಸಿನಿಪಯಣ ಆರಂಭಿಸಿದ್ದ ಮೃಣಾಲ್‌ ಬಳಿಕ ‘ಹಾಯ್‌ ನಾನಾ’ದಲ್ಲಿ ನಟಿಸಿದ್ದರು. ಹಿಂದಿಯಲ್ಲಿ ‘ಸೂಪರ್‌ 30’, ‘ಬಾಟ್ಲಾ ಹೌಸ್‌’ನಲ್ಲೂ ಇವರು ಬಣ್ಣಹಚ್ಚಿದ್ದಾರೆ. ಸದ್ಯ ಹಿಂದಿಯ ‘ದೋ ದಿವಾನೆ ಸೆಹರ್‌ ಮೆ’ ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಿನಿಮಾ ಫೆ.20ರಂದು ಬಿಡುಗಡೆಯಾಗುತ್ತಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.