ADVERTISEMENT

ಸುಪ್ರಸಿದ್ಧ ಮುಕಾಬಲಾ ಹಾಡಿಗೆ ಮರುಜೀವ: ಮತ್ತೆ ಕಂಪನ ಸೃಷ್ಟಿಸಿದ ಪ್ರಭು ದೇವ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2019, 8:36 IST
Last Updated 22 ಡಿಸೆಂಬರ್ 2019, 8:36 IST
   

ಎ.ಆರ್ ರೆಹಮಾನ್ ಸಂಗೀತ ಸಂಯೋಜನೆಯ ಐಕಾನಿಕ್ ಹಾಡು ‘ಮುಕಾಬುಲಾ‘ಗೆ ಮತ್ತೆ ಜೀವ ನೀಡಲಾಗಿದ್ದು, ಸ್ಟ್ರೀಟ್ ಡ್ಯಾನ್ಸರ್ 3ಡಿ ಸಿನಿಮಾದಲ್ಲಿ ಮರು ಸೃಷ್ಟಿ ಮಾಡಲಾಗಿದೆ. ಖ್ಯಾತ ನೃತ್ಯ ಸಂಯೋಜಕ ಪ್ರಭು ದೇವ, ವರುಣ್‌ ದವನ್‌ ಮತ್ತು ಶೃದ್ಧಾ ಕಪೂರ್‌ಈ ಸುಪ್ರಸಿದ್ಧಹಾಡಿಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರ ಎದೆ ಬಡಿತದಲ್ಲಿ ಕಂಪನ ಸೃಷ್ಟಿಸಿದ್ದಾರೆ.

1994ರಲ್ಲಿ ಬಿಡುಗಡೆಗೊಂಡಿದ್ದ, ಪ್ರಭು ದೇವನಟನೆಯಕಾದಲನ್‌ (ಹಿಂದಿಯಲ್ಲಿ ಹಮ್‌ ಸೆ ಹೈ ಮುಕಾಬಲಾ) ಸಿನಿಮಾದ ಹಾಡು ದೇಶದಾದ್ಯಂತ ಜನ ಮನಸೂರೆಗೊಂಡಿತ್ತು. ಈ ಹಾಡನ್ನು ಹಿಂದಿಯ ಸ್ಟ್ರೀಟ್ ಡ್ಯಾನ್ಸರ್ 3ಡಿ ಸಿನಿಮಾದಲ್ಲಿ ಮರು ಸೃಷ್ಟಿಸಲಾಗಿದ್ದು ಶನಿವಾರ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಮೈನವೀರೆಳಿಸುವ ಸಂಗೀತ, ಹುಚ್ಚೆಬ್ಬಿಸುವ ಕುಣಿತ ಮತ್ತು ಜಗಮಗಿಸುವ ಛಾಯಾಗ್ರಹಣ ನೋಡುಗರರನ್ನು ಬೆರಗಾಗಿಸಿದೆ.

ADVERTISEMENT

ಸ್ಟ್ರೀಟ್ ಡ್ಯಾನ್ಸರ್ 3ಡಿ ಸಿನಿಮಾದ ಮುಕಬಲಾ ಹಾಡಿಗೆ ತನಿಷ್ಕ್ ಬಗ್ಚಿ ಸಂಗೀತ ನೀಡಿದ್ದರೆ, ಯಶ್‌ ನಾರ್ವೆಕರ್‌ ಮತ್ತು ಪರಂಪರಾ ಠಾಕೂರ್‌ ಅವರ ಹಿನ್ನೆಲೆ ಧ್ವನಿಯಿದೆ.

ಈ ಸಿನಿಮಾವನ್ನು ರೆಮೊ ಡಿಸೋಜಾ ನಿರ್ದೇಶನ ಮಾಡಿದ್ದಾರೆ. ಭುಷನ್‌ ಕುಮಾರ್‌ ನಿರ್ಮಾಣದ ಚಿತ್ರವು ಜನವರಿ 24ರಂದು ತೆರೆಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.