ನಟ ಡಾಲಿ ಧನಂಜಯ–ಡಾ.ಧನ್ಯತಾ
ಮೈಸೂರು: ನಟ ಡಾಲಿ ಧನಂಜಯ ಹಾಗೂ ಧನ್ಯತಾ ಅವರ ವಿವಾಹವು ಫೆ. 15 ಹಾಗೂ 16ರಂದು ಇಲ್ಲಿನ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ನಡೆಯಲಿದ್ದು, ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಚಾಮುಂಡೇಶ್ವರಿ ದೇಗುಲದ ಮಾದರಿಯಲ್ಲಿ ಬೃಹತ್ ಮಂಟಪ ನಿರ್ಮಾಣವಾಗುತ್ತಿದೆ.
‘ಮೈಸೂರಿನೊಡನೆ ನನಗೆ ಭಾವನಾತ್ಮಕ ನಂಟಿದೆ. ಓದಿದ್ದು, ರಂಗಭೂಮಿ–ನಟನೆಯ ನಂಟು ಬೆಳೆದಿದ್ದು ಇಲ್ಲಿಂದಲೇ. ಹೀಗಾಗಿಯೇ ಇಲ್ಲಿಯೇ ಮದುವೆ ಆಗುತ್ತಿದ್ದೇನೆ ’ ಎಂದು ಧನಂಜಯ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ ಸರಳವಾಗಿ ವಿವಾಹವಾಗುವ ಆಲೋಚನೆ ಇತ್ತು. ಆದರೆ ಮನೆಯವರು, ಅಭಿಮಾನಿಗಳ ಒತ್ತಾಸೆಯಿಂದ ಬೃಹತ್ ಕಾರ್ಯಕ್ರಮವಾಗಿ ಮಾರ್ಪಾಡಾಗಿದೆ’ ಎಂದರು.
‘ ಅಭಿಮಾನಿಗಳಿಗೆಂದೇ ‘ವಿದ್ಯಾಪತಿ’ ದ್ವಾರವನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ್ದೇವೆ. ಜನಸಾಮಾನ್ಯರು–ವಿಐಪಿಗಳಿಗೂ ಒಂದೇ ಮಾದರಿಯ ಊಟದ ವ್ಯವಸ್ಥೆ ಇರಲಿದೆ. ಕನ್ನಡ ಚಿತ್ರರಂಗದ ಜೊತೆಗೆ ಹೊರ ರಾಜ್ಯ–ದೇಶಗಳಿಂದಲೂ ಸ್ನೇಹಿತರು ಬರಲಿದ್ದಾರೆ. 25–35 ಸಾವಿರದಷ್ಟು ಜನ ಸೇರುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.
ಫೆ. 15ರ ಸಂಜೆ ಆರತಕ್ಷತೆ ಹಾಗೂ 16ರಂದು ಬೆಳಿಗ್ಗೆ ಮದುವೆ ಕಾರ್ಯಕ್ರಮ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.