ADVERTISEMENT

ಪ್ರೇಯಸಿಗೆ ಕಪಾಳಮೋಕ್ಷ: ಸಿಗ್ನಲ್‌ನಲ್ಲಿಯೇ ಯುವಕನಿಗೆ ನಟ ನಾಗಶೌರ್ಯ ಕ್ಲಾಸ್

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 14:40 IST
Last Updated 1 ಮಾರ್ಚ್ 2023, 14:40 IST
ಘಟನೆ ಸಂದರ್ಭ
ಘಟನೆ ಸಂದರ್ಭ   

ಬೆಂಗಳೂರು: ಯುವಕನೊಬ್ಬ ತನ್ನ ಪ್ರೇಯಸಿ ಜೊತೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ತೆಲುಗು ಯುವ ನಟ ನಾಗ ಶೌರ್ಯ ಅವರು ರಸ್ತೆ ಮಧ್ಯೆಯೇ ಆ ಯುವಕನಿಗೆ ಕ್ಲಾಸ್ ತೆಗೆದುಕೊಂಡ ಘಟನೆ ನಡೆದಿದೆ.

ಇತ್ತೀಚೆಗೆ ಹೈದರಾಬಾದ್‌ನ ಜನನಿಬಿಡ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಸಿಗ್ನಲ್ ಒಂದರಲ್ಲಿ ನಿಂತಿದ್ದಾಗ ಯುವಕನೊಬ್ಬ ಬೈಕ್‌ನಲ್ಲಿಯೇ ಯುವತಿಯ ಕೆನ್ನೆಗೆ ಭಾರಿಸಿದ್ದ. ಕಾರಿನಲ್ಲಿದ್ದ ನಾಗ ಶೌರ್ಯ ಅವರು ಇದನ್ನು ಕಂಡು ಕಾರಿನಿಂದ ಕೆಳಗಿಳಿದು ಆ ಯುವಕನನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಯುವಕ ಯುವತಿ ಬಳಿ ಕ್ಷಮೆ ಕೇಳುವವರೆಗೂ ನಾಗಶೌರ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಬಳಿಕ ಆ ಯುವಕ ಯುವತಿಗೆ ಕ್ಷಮೆ ಕೇಳಿದ್ದರಿಂದ ಪ್ರಕರಣ ಅಲ್ಲಿಗೆ ಮುಗಿದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂದು ನ್ಯೂಸ್ 18 ವೆಬ್‌ಸೈಟ್ ವರದಿ ಮಾಡಿದೆ.

ನಾಗ ಶೌರ್ಯ ಅವರು ಬೆಂಗಳೂರು ಮೂಲದ ಅನುಷಾ ಶೆಟ್ಟಿ ಅವರನ್ನು ಇತ್ತೀಚೆಗೆ ವರಿಸಿದ್ದಾರೆ. ಇಂಟಿರಿಯರ್ ಫ್ಯಾಶನ್ ಡಿಸೈನರ್ ಆಗಿರುವ ಅನುಷಾ ಅವರು ಉದ್ಯಮಿ ಕೂಡ ಆಗಿದ್ದಾರೆ. ನಾಗಶೌರ್ಯ ಹಾಗೂ ಅನುಷಾ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು.

ಎರಡೂ ಕುಟುಂಬಗಳ ಸಮಕ್ಷಮದಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ವಿವಾಹ ನಡೆದಿದೆ. ದಾಂಪತ್ಯಕ್ಕೆ ಕಾಲಿರಿಸಿರುವ ನಾಗೌಶೌರ್ಯ ದಂಪತಿಗೆ ಚಿತ್ರರಂಗದ ಅನೇಕರು ಶುಭ ಕೋರಿದ್ದಾರೆ.

ತೆಲುಗಿನಲ್ಲಿ 'ಓ ಬೇಬಿ' ಸೇರಿದಂತೆ 24 ಸಿನಿಮಾಗಳಲ್ಲಿ ನಾಗಶೌರ್ಯ ನಾಯಕ ನಟನಾಗಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.