ADVERTISEMENT

Nagaraj Somayaji Movie: ಸೆಟ್ಟೇರಿತು ‘ದೇವಿ ಮಹಾತ್ಮೆ’

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 23:30 IST
Last Updated 2 ಮಾರ್ಚ್ 2026, 23:30 IST
ಚಿತ್ರತಂಡ 
ಚಿತ್ರತಂಡ    

‘ಮರ್ಯಾದೆ ಪ್ರಶ್ನೆ’ ಸಿನಿಮಾ ನಿರ್ದೇಶಿಸಿದ್ದ ನಾಗರಾಜ್‌ ಸೋಮಯಾಜಿ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿದ್ದಾರೆ. ಅವರ  ನಿರ್ದೇಶನದ ಹೊಸ ಸಿನಿಮಾ ‘ದೇವಿ ಮಹಾತ್ಮೆ’ಯ ಮುಹೂರ್ತ ಇತ್ತೀಚೆಗೆ ಉಡುಪಿ ಜಿಲ್ಲೆಯ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಿತು. 

‘ದೇವಿ ಮಹಾತ್ಮೆ’ ಚಿತ್ರಕ್ಕೆ‌ ನಾಗರಾಜ ಸೋಮಯಾಜಿ ಅವರೇ ಕಥೆ ಬರೆದಿದ್ದಾರೆ. ಬರವಣಿಗೆಯಲ್ಲಿ ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ‌ ಹಾಗೂ ಗುರು ಆರ್ಯ ಹಾಗೂ ವಾದಿರಾಜ ಶೆಟ್ಟಿ ಜೊತೆಯಾಗಿದ್ದಾರೆ. ಚಿತ್ರಕ್ಕೆ ಎಸ್.‌ಕೆ. ರಾವ್ ಛಾಯಾಚಿತ್ರಗ್ರಹಣವಿರಲಿದ್ದು, ಪ್ರಸಾದ್ ಕೆ.ಶೆಟ್ಟಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಕಾಮಿಡಿ ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಈ ಸಿನಿಮಾದ ಶೂಟಿಂಗ್‌ ಆರಂಭವಾಗಿದ್ದು, ಕುಂದಾಪುರದ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಮುಹೂರ್ತ ಕಾರ್ಯಕ್ರಮದಲ್ಲಿ ಚಿತ್ರದ‌ ನಿರ್ಮಾಪಕ ಗಾಂಧಿರಾಜನ್ ಉಪಸ್ಥಿತರಿದ್ದರು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.