‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಳಿಕ ನಿರ್ದೇಶಕ ಶಶಾಂಕ್ ಹಾಗೂ ನಟ ಡಾರ್ಲಿಂಗ್ ಕೃಷ್ಣ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಸಿನಿಮಾ ‘ಬ್ರ್ಯಾಟ್’. ಈ ಸಿನಿಮಾದ ‘ನಾನೇ ನೀನಂತೆ’ ಹಾಡು ಇದೀಗ ಯುಟ್ಯೂಬ್‌ನಲ್ಲಿ ಒಂದು ಕೋಟಿ ವೀಕ್ಷಣೆ ಪಡೆದಿದೆ.
ಡಾಲ್ಫಿನ್ ಎಂಟರ್‌ಟೇನ್ಮೆಂಟ್ ನಿರ್ಮಾಣದ ಈ ಸಿನಿಮಾ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಸಿದ್ ಶ್ರೀರಾಮ್ ಮತ್ತು ಲಹರಿ ಮಹೇಶ್ ಹಾಡಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗಿತ್ತು. ಇನ್‌ಸ್ಟಾಗ್ರಾಂನಲ್ಲಿ ಈ ಹಾಡಿಗೆ ಒಂದು ತಿಂಗಳ ಅವಧಿಯಲ್ಲಿ ಎರಡೂವರೆ ಲಕ್ಷ ಜನರು ರೀಲ್ಸ್ ಮಾಡಿದ್ದಾರೆ ಎಂದಿದೆ ಚಿತ್ರತಂಡ.
ಈ ಚಿತ್ರವು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಹಿಂದೆ ಶಶಾಂಕ್, ಅರ್ಜುನ್ ಜನ್ಯ ಹಾಗೂ ಸಿದ್ ಶ್ರೀರಾಮ್ ಅವರ ಕಾಂಬಿನೇಶನ್‌ನಲ್ಲಿ ‘ಲವ್ 360’ ಚಿತ್ರದ ‘ಜಗವೇ ನೀನು ಗೆಳತಿಯೇ’ ಹಾಡು ಇದೇ ರೀತಿ ಹಿಟ್ ಆಗಿತ್ತು. ‘ನನ್ನ ಸಿನಿಪಯಣದಲ್ಲಿ ಅತೀ ಹೆಚ್ಚು ವೆಚ್ಚದಲ್ಲಿ ಮೂಡಿಬಂದಿರುವ ಹಾಡಿದು. ಈ ಹಾಡಿನ ಟ್ಯೂನ್ ಅಂತಿಮಗೊಳಿಸಲು ಸುಮಾರು 6 ತಿಂಗಳ ಸಮಯ ಬೇಕಾಯಿತು. ಕನ್ನಡದಲ್ಲಿ ಈ ಹಾಡನ್ನು ನಾನೇ ಬರೆದಿದ್ದೇನೆ’ ಎಂದಿದ್ದಾರೆ ಶಶಾಂಕ್. ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಜೋಡಿಯಾಗಿ ಮನಿಶಾ ಕಂದಕೂರ್ ನಟಿಸಿದ್ದು, ಮಧ್ಯಮ ವರ್ಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.