ADVERTISEMENT

ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದ ಸಿನಿ ತಾರೆಯರು ಇವರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2025, 10:21 IST
Last Updated 17 ಅಕ್ಟೋಬರ್ 2025, 10:21 IST
   

ಭಾರತದ ಅತ್ಯಂತ ಗೌರವಾನ್ವಿತ ಸಮಾರಂಭಗಳಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕೂಡ ಒಂದು. ಅದರಂತೆ ಇತ್ತೀಚೆಗೆ ದೆಹಲಿಯಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಿನಿಮಾ ರಂಗದಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದರು.

ರಾಷ್ಟ್ರೀಯ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ– ನಟಿ ವಿಭಾಗದಲ್ಲಿ ಪ್ರಶಸ್ತಿಸ ಸ್ವೀಕರಿಸುವುದು ಕೂಡ ಗಮನಾರ್ಹ ಸಾಧನೆ ಮತ್ತು ನಟನ ವೃತ್ತಿಜೀವನದಲ್ಲಿ ಒಂದು ಮಹತ್ವದ ಮೈಲಿಗಲ್ಲು. ಇತ್ತಿಚೀನ ವರ್ಷಗಳಲ್ಲಿ ಒಂದೇ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡವರ ಮಾಹಿತಿ ಇಲ್ಲಿದೆ.

71 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ವಿಕ್ರಾಂತ್ ಮ್ಯಾಸ್ಸೆ ಅವರ ‘12th ಫೇಲ್' ಚಿತ್ರಕ್ಕಾಗಿ ಹಾಗೂ ಶಾರುಖ್ ಖಾನ್ ಅವರ 'ಜವಾನ್' ಚಿತ್ರದ ಪಾತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದರು.

ADVERTISEMENT

68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಆಲಿಯಾ ಭಟ್ ಅವರಿಗೆ ‘ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಅಭಿನಯಕ್ಕಾಗಿ ಹಾಗೂ ಕೃತಿ ಸನೋನ್ ಅವರ 'ಮಿಮಿ' ಸಿನಿಮಾದ ಪಾತ್ರಕ್ಕಾಗಿ ಪ್ರಶಸ್ತಿ ಪಡೆದಿದ್ದರು.

68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಅಜಯ್ ದೇವಗನ್ ಅವರ ‘ತಾನ್ಹಾಜಿ: ದಿ ಅನ್ಸಂಗ್ ವಾರಿಯರ್' ಚಿತ್ರದ ನಟನೆಗಾಗಿ ಹಾಗೂ ಸೂರ್ಯ ಅವರ 'ಸೂರರೈ ಪೊಟ್ರು’ ಚಿತ್ರ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

67 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಬಾಜಪೇಯಿ ಅವರ ‘ಭೋಂಸ್ಲೆ‘ ಚಿತ್ರದ ನಟನೆಗಾಗಿ ಹಾಗೂ ಧನುಷ್ ಅವರ ‘ಅಸುರನ್’ ಸಿನಿಮಾದ ಅಭಿನಯಕ್ಕಾಗಿ ಪ್ರಶಸ್ತಿಯನ್ನು ಪಡೆದಿದ್ದರು.

66 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಆಯುಷ್ಮಾನ್ ಅವರ 'ಅಂಧಾಧುನ್' ಸಿನಿಮಾಕ್ಕಾಗಿ ಹಾಗೂ ವಿಕ್ಕಿ ಕೌಶಲ್ ಅವರ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್ ' ಚಿತ್ರಕ್ಕಾಗಿ ಪ್ರಶಸ್ತಿ ಸ್ವೀಕರಿಸಿದ್ದರು.

60 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಇರ್ಫಾನ್ ಖಾನ್ ಅವರ 'ಪಾನ್ ಸಿಂಗ್ ತೋಮರ್' ಚಿತ್ರದ ಪಾತ್ರಕ್ಕಾಗಿ ಮತ್ತು ವಿಕ್ರಮ್ ಗೋಖಲೆ ಅವರ ‘ಅನುಮತಿ‘ ಸಿನಿಮಾಕ್ಕೆ ಅತ್ಯುತ್ತಮ ನಟ ವಿಭಾಗದಲ್ಲಿ ಪ್ರಶಸ್ತಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.