ADVERTISEMENT

ನಿಖಿಲ್ ಕುಮಾರಸ್ವಾಮಿ–ರೇವತಿ ಮಗನ ನಾಮಕರಣ: ಪುತ್ರನ ಹೆಸರು ‘ಅವ್ಯನ್ ದೇವ್’

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 10:50 IST
Last Updated 8 ಜೂನ್ 2022, 10:50 IST
ರೇವತಿ, ನಿಖಿಲ್‌
ರೇವತಿ, ನಿಖಿಲ್‌   

ಚಂದನವನದ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಅವರ ಪುತ್ರನ ನಾಮಕರಣ ಸಮಾರಂಭಶಾಸ್ತ್ರೋಕ್ತವಾಗಿ ನೆರವೇರಿದೆ.

ನಿಖಿಲ್ ಹಾಗೂ ರೇವತಿ ಅವರ ಪುತ್ರನಿಗೆ‘ಅವ್ಯನ್ ದೇವ್’ ಎಂದು ಹೆಸರಿಡಲಾಗಿದೆ.ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ನಾಮಕರಣ ಮಾಡಲಾಗಿದೆ. ಈ ಸಂದರ್ಭದಲ್ಲಿಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ಕುಟುಂಬಸ್ಥರು ಹಾಗೂ ಸ್ನೇಹಿತರು ಪಾಲ್ಗೊಂಡಿದ್ದರು

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ನಿಖಿಲ್‌–ರೇವತಿಗೆ ಗಂಡು ಮಗು ಬರಮಾಡಿಕೊಂಡಿದ್ದರು. ನಿಖಿಲ್ ಪುತ್ರನಿಗೆ ಇದೀಗ ಒಂಬತ್ತು ತಿಂಗಳು.

ADVERTISEMENT

ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಕೋವಿಡ್‌ಲಾಕ್‌ಡೌನ್‌ನಲ್ಲಿ ಮದುವೆಯಾಗಿದ್ದರು.ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿನ ಫಾರ್ಮ್‌ ಹೌಸ್‌ನಲ್ಲಿ ವಿವಾಹ ನಡೆದಿತ್ತು.

‘ಅವ್ಯನ್’ ಎಂದರೆ ಸಂಸ್ಕೃತದಲ್ಲಿ ದೇವರು ಎಂಬ ಅರ್ಥ ಇದೆ ಎಂದುಪಂಡಿತರು ಹೇಳುತ್ತಾರೆ. ನಾವು ಯಾವುದೇ ದೇವರನ್ನು‘ಅವ್ಯನ್ ಎಂದು ಕರೆಯಬಹುದು. ಪುರಾಣಗಳಲ್ಲಿ ಗಣಪತಿಗೂ ‘ಅವ್ಯನ್‌‘ ಎಂದು ಕರೆಯಲಾಗಿದೆ ಎಂದು ಸಂಸ್ಕೃತ ಪಂಡಿತರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.