ADVERTISEMENT

‘ನಿರ್ಮಲ’ ಮನಸಿನ ಮಕ್ಕಳ ಚಿತ್ರ

​ಪ್ರಜಾವಾಣಿ ವಾರ್ತೆ
Published 16 ಜುಲೈ 2019, 11:09 IST
Last Updated 16 ಜುಲೈ 2019, 11:09 IST
ನಿರ್ಮಲ ಚಿತ್ರತಂಡ
ನಿರ್ಮಲ ಚಿತ್ರತಂಡ   

ಜಗತ್ತಿನಲ್ಲೇ ಮೊಟ್ಟಮೊದಲಪ್ರಯೋಗವೆನ್ನುವಂತೆಛಾಯಾಗ್ರಾಹಕ ಮತ್ತುನಿರ್ಮಾಪಕರನ್ನು ಹೂರತುಪಡಿಸಿ ಉಳಿದ ಎಲ್ಲ ವಿಭಾಗದಲ್ಲೂಮಕ್ಕಳೇಸೇರಿಕೊಂಡು ಮಾಡಿರುವ ಸಿನಿಮಾ ಎನ್ನುವ ಹೆಗ್ಗಳಿಕೆ ‘ನಿರ್ಮಲ’ ಚಿತ್ರದ್ದು. ಇದೊಂದು ರೀತಿಯಲ್ಲಿಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ಮಾಡಿದ ಸಿನಿಮಾ ಎನ್ನಬಹುದು. ಇದು ಸದ್ಯದಲ್ಲೇ ತೆರೆಗೆ ಬರುವ ನಿರೀಕ್ಷೆ ಇದೆ.

ಪ್ರಧಾನಮಂತ್ರಿ ಸ್ವಚ್ಛ ಭಾರತ ಅಭಿಯಾನ ಮತ್ತು ಬಯಲು ಬಹಿರ್ದೆಸೆ ಮುಕ್ತ ದೇಶವನ್ನಾಗಿಸುವ ಸಂದೇಶವನ್ನು ಈ ಚಿತ್ರದಲ್ಲಿ ಸಾರಲಾಗಿದೆಯಂತೆ. ಜತೆಗೆ ಸಾಮಾಜಿಕ ಕಾಳಜಿಯ ಸಂದೇಶವೂ ಇದರಲ್ಲಿದೆಯಂತೆ.ಇವೆಲ್ಲವನ್ನೂಮಕ್ಕಳು ಹೇಗೆ ಸಾಧಿಸಿ ತೋರಿಸುತ್ತಾರೆ ಎನ್ನುವುದು ಚಿತ್ರದ ಕುತೂಹಲ. ಅದಕ್ಕಾಗಿ ‘ಮುಗ್ಧ ಮನಸುಗಳ ಕನಸು’ ಎಂಬ ಅಡಿಬರಹವನ್ನೂ ಚಿತ್ರಕ್ಕೆ ನೀಡಲಾಗಿದೆ. ಈ ಚಿತ್ರದಲ್ಲಿ ತೊಡಗಿರುವ ಮಕ್ಕಳೆಲ್ಲರೂ14ರಿಂದ 15ರ ವಯೋಮಾನದವರು. ಎಲ್ಲರೂ ಸೂಕ್ತ ತರಬೇತಿ ಪಡೆದುಕೊಂಡೇ ಚಿತ್ರರಂಗಕ್ಕೆ ಅಡಿ ಇಟ್ಟಿರುವುದು ಅವರ ಮಾತು ಮತ್ತು ಕೃತಿಯಲ್ಲಿ ಕಾಣಿಸುತ್ತಿತ್ತು.

ಗ್ರಾಮೀಣ ಸೊಗಡಿನ ಮತ್ತು ನಗರದ ಆಟಗಳ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವ ಎರಡು ಹಾಡುಗಳಿಗೆ ರವಿ ಸಾಹಿತ್ಯ ಬರೆದಿದ್ದಾರೆ. ವರ್ಣ ಶ್ರೀಮುರೂರು ಸಂಗೀತ ಸಂಯೋಜಿಸಿದ್ದು,ಸರಿಗಮಮ ಖ್ಯಾತಿಯ ಜ್ಯೋತಿಕಾ ಹಾಗೂ ನಿಖಿತಾ ಹಾಡಿದ್ದಾರೆ.

ADVERTISEMENT

ನಿರ್ದೇಶನ ಲೋಹಿತ್‍ ಪ್ರಕಾಶ್, ಸಂಕಲನ ಲೋಹಿತ್‍ ಚಂದನ್, ನೃತ್ಯ ಸಂಯೋಜನೆ ಭಾವನಾ ನಾಯಕ್, ಪ್ರಚಾರ ಕಲೆ ಅಂಕಿತಾ ನಾಯ್ಡು, ಕಲಾ ನಿರ್ದೇಶನ ಮಿಥಿಲೇಶ್-ಆರ್ಯನ್, ವಸ್ತ್ರಾಲಂಕಾರ ಪುಣ್ಯಶ್ರೀ ಅವರದ್ದು. ಛಾಯಾಗ್ರಹಣ ವಿ.ಪವನ್‍ಕುಮಾರ್, ನಿರ್ಮಾಣ ಬಿ.ಎಚ್.ಉಲ್ಲಾಸ್‍ಗೌಡ-ಅವಿನಾಶ್ ಅವರದ್ದು.

ಉಲ್ಲಾಸ್ ರಂಗಭೂಮಿ ಶಾಲೆಯ ಮಕ್ಕಳು ಚಿತ್ರದಲ್ಲಿ ತಂತ್ರಜ್ಞ,ಕಲಾವಿದರಾಗಿಗುರುತಿಸಿಕೊಂಡಿದ್ದಾರೆ. ರಾಮನಗರ, ಚನ್ನಪಟ್ಟಣ, ಬಿಡದಿ ಭಾಗಗಳಲ್ಲಿ ಒಂದೇ ಹಂತದಲ್ಲಿ ಚಿತ್ರದಚಿತ್ರೀಕರಣ ನಡೆಸಲಾಗಿದೆ.

ಚಿತ್ರದ ಟ್ರೇಲರನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಅಮೆರಿಕದಲ್ಲಿ ನೆಲೆಸಿರುವದೀಪಕ್-ಸವಿತಾರಾವ್ ದಂಪತಿ ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.