ADVERTISEMENT

ತಾಯ್ತನದ ಚಿತ್ರ ಹಂಚಿಕೊಂಡು ಅಚ್ಚರಿ ಮೂಡಿಸಿದ ನಟಿ ನಿತ್ಯಾ ಮೆನನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2025, 11:11 IST
Last Updated 21 ನವೆಂಬರ್ 2025, 11:11 IST
<div class="paragraphs"><p>ನಟಿ ನಿತ್ಯಾ ಮೆನನ್</p></div>

ನಟಿ ನಿತ್ಯಾ ಮೆನನ್

   

ಚಿತ್ರ: ಇನ್‌ಸ್ಟಾಗ್ರಾಮ್

ಬಹುಭಾಷಾ ನಟಿ ನಿತ್ಯಾ ಮೆನನ್ ಸಾಮಾಜಿಕ ಮಾಧ್ಯಮದಲ್ಲಿ ತಾಯ್ತನದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ನಟಿ ನಿತ್ಯಾ ಮೆನನ್ ಈ ಫೋಟೊಗಳನ್ನು ಹಂಚಿಕೊಳ್ಳುವುದಕ್ಕೆ ಒಂದು ಕಾರಣ ಕೂಡ ಇದೆ.

ಅದುವೇ ‘ವಂಡರ್ ವುಮೆನ್’ ಸಿನಿಮಾ. ಈ ಸಿನಿಮಾದಲ್ಲಿನ ತಾಯಿಯ ಪಾತ್ರಕ್ಕಾಗಿ ಅಭ್ಯಾಸ ನಡೆಸುವಾಗ ಕ್ಲಿಕ್ಕಿಸಿಕೊಂಡ ಚಿತ್ರಗಳಾಗಿವೆ.

ವಿಶೇಷ ಏನೆಂದರೆ ತಾಯ್ತನ ಹಾಗೂ ಮಗುವಿನ ಆರೈಯಲ್ಲಿ ನಟಿ ತಮ್ಮನ್ನು ತಾವು ತೊಡಗಿಸಿಕೊಂಡ ಬಗ್ಗೆ ಚಿತ್ರಗಳಲ್ಲಿ ಕಾಣಬಹುದು. ತಾಯಿಯ ಪಾತ್ರಕ್ಕಾಗಿ ನಟಿ ಮಾಡಿದ ಅಭ್ಯಾಸಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೊತೆಗೆ ಸಿನಿಮಾ ಸೆಟ್‌ನ ಅನುಭವ ಹಾಗೂ ತಂಡದ ಜೊತೆಗೆ ಕಳೆದ ಸುಂದರ ಕ್ಷಣದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಇನ್ನು, ನಟಿ ನಿತ್ಯಾ ಮೆನನ್ ಅವರು ಕನ್ನಡದಲ್ಲಿ ಮೈನಾ, ಕೋಟಿಗೊಬ್ಬ-2 ಸೇರಿದಂತೆ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.