ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಯಡೂರು ಸಮೀಪದ ಮೇಲಿನ ಕೊಪ್ಪದ ಮಾಣಿ ಹಿನ್ನೀರಿನ ಪ್ರದೇಶದಲ್ಲಿ ಕಾಂತಾರ ಚಾಪ್ಟರ್ 1 ಚಿತ್ರೀಕರಣ ಸಮಯದಲ್ಲಿ ಯಾವುದೇ ಅವಘಡ ಸಂಭವಿಸಿಲ್ಲ ಎಂದು ಹೊಂಬಾಳೆ ಫಿಲಂಸ್ ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ಆದರ್ಶ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ಸಂಜೆ ಭಾರಿ ಗಾಳಿ ಮಳೆ ಚಿತ್ರೀಕರಣ ಹಾಕಿದ್ದ ಶಿಪ್ ಸೆಟ್ ಹಾನಿಗೊಳಗಾಗಿದೆ. ಮತ್ಯಾವುದೇ ದುರಂತ ನಡೆದಿಲ್ಲ. ನಟರು, ಸಹನಟರು ಆರೋಗ್ಯವಾಗಿದ್ದು, ಭಾನುವಾರ ಕೂಡ ಚಿತ್ರೀಕರಣ ನಡೆಯುತ್ತಿದೆ. ನಾವು ಹಿನ್ನೀರಿನ ಭಾಗದಲ್ಲಿ ಚಿತ್ರೀಕರಣ ನಡೆಸಿಲ್ಲ. ಹಿನ್ನೆಲೆಯಲ್ಲಿ ಶಿಪ್ ಸೆಟ್ಟಿಂಗ್ ಬಳಸಲಾಗಿದೆ. ಅಷ್ಟೆ. ಇಲ್ಲಿ ಚಿತ್ರೀಕರಣ ನಡೆಸಲು ಸಂಬಂಧಿಸಿದ ಇಲಾಖೆಗಳಿಂದ ಪರವಾನಗಿ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.