ADVERTISEMENT

ಓಣಂ ಹಬ್ಬಕ್ಕೆ ಶುಭಕೋರಿದ ನಿರ್ದೇಶಕ ವಿಘ್ನೇಶ್‌ ಶಿವನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2023, 11:25 IST
Last Updated 27 ಆಗಸ್ಟ್ 2023, 11:25 IST
ವಿಘ್ನೇಶ್‌ ಶಿವನ್‌ ಮತ್ತು ನಯನತಾರ
ವಿಘ್ನೇಶ್‌ ಶಿವನ್‌ ಮತ್ತು ನಯನತಾರ    

ಮುಂಬೈ: ನಟಿ ನಯನತಾರ ಹಾಗೂ ನಿರ್ದೇಶಕ ವಿಘ್ನೇಶ್‌ ಶಿವನ್‌ ಅವರು ಮಕ್ಕಳೊಂದಿಗೆ ಓಣಂ ಹಬ್ಬವನ್ನು ಆಚರಿಸಿದ್ದಾರೆ.

ಸಾಂಪ್ರದಾಯಿಕ ಉಡುಗೆಯ ಫೋಟೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಘ್ನೇಶ್‌ ಶಿವನ್‌, ಮುಂಚಿತವಾಗಿಯೇ ಎಲ್ಲರಿಗೂ ಓಣಂ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.

ಪತ್ನಿ ನಯನತಾರ ಹಾಗೂ ಅವಳಿ ಮಕ್ಕಳ ಫೋಟೊ ಹಂಚಿಕೊಂಡಿರುವ ಅವರು, ಸರಳ ಮತ್ತು ಸುಂದರ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ.

ADVERTISEMENT

ಮಕ್ಕಳೊಂದಿಗೆ ಇದು ಮೊದಲ ಓಣಂ ಆಚರಣೆ ಅಂತಲೂ ವಿಘ್ನೇಶ್‌ ಶಿವನ್‌ ಬರೆದುಕೊಂಡಿದ್ದಾರೆ.

ಈ ವರ್ಷ ಓಣಂ ಹಬ್ಬವನ್ನು ಆಗಸ್ಟ್ 31 ರಂದು ಆಚರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.