ADVERTISEMENT

ಟ್ವಿಟರ್‌‌ನಲ್ಲಿ ದಾಖಲೆ ಬರೆದ ತಮಿಳು ನಟ ಧನುಷ್: ಕೋಟಿಗೂ ಹೆಚ್ಚು ಫಾಲೋವರ್‌‌ಗಳು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 12:28 IST
Last Updated 14 ಸೆಪ್ಟೆಂಬರ್ 2022, 12:28 IST
ಧನುಷ್
ಧನುಷ್    

ಕಾಲಿವುಡ್‌ ನಟಧನುಷ್ ಸಾಮಾಜಿಕ ಜಾಲತಾಣಟ್ವಿಟರ್‌‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ತಮಿಳು ಸಿನಿಮಾರಂಗ ಮಾತ್ರವಲ್ಲದೇ ದಕ್ಷಿಣ ಭಾರತದ ಸಿನಿಮಾ ಕ್ಷೇತ್ರದಲ್ಲಿ ದಾಖಲೆ ಮಾಡಲಾಗಿದೆ.

ಅಭಿಮಾನಿಗಳು, ಆಪ್ತರು, ಗೆಳೆಯರ ನಡುವೆ ಸದಾ ಸಂಪರ್ಕದಲ್ಲಿರುವ ಧನುಷ್‌ ಸಾಮಾಜಿಕ ಮಾಧ್ಯಮಗಳನ್ನು ಬಳಕೆ ಮಾಡುತ್ತಾರೆ. ಧನುಷ್‌ ಅವರು ಟ್ವಿಟರ್, ಫೇಸ್‌ಬುಕ್‌ ಮತ್ತು ಇನ್‌‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡುತ್ತಿದ್ದಾರೆ.

ಸದ್ಯ ಧನುಷ್‌, ಟ್ವಿಟರ್‌ನಲ್ಲಿ1 ಕೋಟಿ 10 ಲಕ್ಷ ಜನಫಾಲೋವರ್‌‌ಗಳನ್ನು ಹೊಂದುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಇಷ್ಟೂ ಜನ ಫಾಲೋವರ್‌ಗಳನ್ನು ಹೊಂದಿರುವ ತಮಿಳಿನ ಏಕೈಕ ನಟ ಮತ್ತು ದಕ್ಷಿಣ ಸಿನಿಮಾ ರಂಗದಲ್ಲೇ ಎರಡನೇ ನಟ ಎಂಬ ದಾಖಲೆಗೆ ಧನುಷ್ ಪಾತ್ರರಾಗಿದ್ದಾರೆ.

ADVERTISEMENT

ಧನುಷ್‌ಫೇಸ್‌‌ಬುಕ್‌‌ನಲ್ಲಿ 69 ಲಕ್ಷ‌ ಮತ್ತು ಇನ್‌‌ಸ್ಟಾಗ್ರಾಂನಲ್ಲಿ 49 ಲಕ್ಷ ಫಾಲೋವರ್‌‌ಗಳನ್ನು ಹೊಂದಿದ್ದಾರೆ. ಧನುಷ್‌‌ ಬಳಸುವ ಸಾಮಾಜಿಕ ಜಾಲತಾಣಗಳ ಪೈಕಿ ಟ್ವಿಟರ್‌‌ನಲ್ಲಿ ಅತಿಹೆಚ್ಚು ಫಾಲೋವರ್‌‌ಗಳನ್ನು ಹೊಂದಿದ್ದಾರೆ. ತಮಿಳಿನ ಸಿನಿಮಾ ವಿಮರ್ಶಕ, ವಿಶ್ಲೇಷಕ ರಮೇಶ್‌ ಬಾಲಾ ಎಂಬುವರು ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಇತ್ತೀಚೆಗೆ ತೆರೆಕಂಡ 'ತಿರುಚಿತ್ರಂಬಲಂ' ಸಿನಿಮಾದ ಮೂಲಕ ಧನುಷ್‌ ಗಮನ ಸೆಳೆದಿದ್ದು, ಸಿನಿಮಾ ಹಿಟ್‌ ಆಗಿದೆ. 'ನಾನೇ ವರುವೇನ್' ಚಿತ್ರದಲ್ಲಿ ಧನುಷ್‌ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದ್ದು ನವೆಂವರ್‌ ಅಥವಾ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.