ADVERTISEMENT

Oscars 2023: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಂಚಿದ ದೀಪಿಕಾ ಪಡುಕೋಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಮಾರ್ಚ್ 2023, 16:17 IST
Last Updated 13 ಮಾರ್ಚ್ 2023, 16:17 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ಲಾಸ್ ಏಂಜಲೀಸ್: ಇಲ್ಲಿ ಸೋಮವಾರ ನಡೆದ 95 ನೇ ಅಕಾಡೆಮಿ ಅವಾರ್ಡ್ಸ್‌ ಸಮಾರಂಭದಲ್ಲಿ (ಆಸ್ಕರ್ ಪ್ರಶಸ್ತಿ) ನಟಿ ದೀಪಿಕಾ ಪಡುಕೋಣೆ ಮಿಂಚಿದರು.

ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿನ ಪರಿಚಯ ಮಾಡುವ ಹೊಣೆಯನ್ನು ಅವರಿಗೆ ವಹಿಸಲಾಗಿತ್ತು.

ಆಕರ್ಷಕ ಕಪ್ಪು ಬಣ್ಣದ ಉಡುಗೆಯಲ್ಲಿ ವೇದಿಕೆಗೆ ಬಂದ ದೀಪಿಕಾ ಆರ್‌ಆರ್‌ಆರ್ ಸಿನಿಮಾದ ನಾಟು ನಾಟು ಬಗ್ಗೆ ಹೆಮ್ಮೆ ಮತ್ತು ಅಭಿಮಾನದಿಂದ ಪರಿಚಯ ಮಾಡಿಕೊಟ್ಟರು.

ADVERTISEMENT

ನಾಟು ನಾಟು ಹಾಡು ಆಸ್ಕರ್ ಪ್ರಶಸ್ತಿ ಪಡೆಯುತ್ತಿರುವುದು ಭಾರತೀಯರ ಹೆಮ್ಮೆ ಎಂದು ಹೇಳಿದರು. ಬಳಿಕ ವೇದಿಕೆಯಲ್ಲಿಯೇ ಗಾಯಕರಾದ ಕಾಲಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಅವರು ಹಾಡು ಹೇಳಿದರು. ಕಲಾವಿದರು ನಾಟು ನಾಟು ಹಾಡಿಗೆ ಹೆಜ್ಜೆ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.