ADVERTISEMENT

‘ಓಸ್ಲೋ: ಎ ಟೇಲ್ ಆಫ್ ಎ ಪ್ರಾಮಿಸ್’ : ಐಎಫ್‌ಎಫ್‌ಐನಲ್ಲಿ ಮೊದಲ ಪ್ರದರ್ಶನ

ಪಿಟಿಐ
Published 18 ನವೆಂಬರ್ 2025, 6:12 IST
Last Updated 18 ನವೆಂಬರ್ 2025, 6:12 IST
   

ನವದೆಹಲಿ: 'ಓಸ್ಲೋ: ಎ ಟೇಲ್ ಆಫ್ ಎ ಪ್ರಾಮಿಸ್' ಸಾಕ್ಷ್ಯ ಚಿತ್ರವು ಬಿಡುಗಡೆಗೂ ಮುನ್ನ ಗೋವಾದಲ್ಲಿ ನಡೆಯುವ 56 ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ತೆರೆ ಕಾಣಲಿದೆ.

‘ಓಸ್ಲೋ: ಎ ಟೈಲ್ ಆಫ್ ಪ್ರಾಮಿಸ್‘ ಸಾಕ್ಷ್ಯ ಚಿತ್ರವನ್ನು ಇಶಾ ಪುಂಗಲಿಯಾ ನಿರ್ದೇಶಿಸಿದ್ದರೆ, ಅಬ್ರಹಾಂ ಪ್ರಸ್ತುತಪಡಿಸಿದ್ದಾರೆ. ಜೆಎ ಎಂಟರ್‌ಟೈನ್‌ಮೆಂಟ್, ಪ್ರೊಟೆಕ್ಟೆರಾ ಇಕೋಲಾಜಿಕಲ್ ಫೌಂಡೇಶನ್ ಮತ್ತು ವಾನರ್ ನಿರ್ಮಿತ್ ಅವರ ಸಹಭಾಗಿತ್ವದಲ್ಲಿ ನಿರ್ಮಾಣವಾಗಿದೆ.

ಪ್ರಾಣಿಗಳಿಗೂ ಮನುಷ್ಯರ ನಡುವಿನ ಉತ್ತಮ ಬಾಂಧವ್ಯದ ಕುರಿತ ಸಾಕ್ಷ್ಯ ಚಿತ್ರ ಇದಾಗಿದೆ.

ADVERTISEMENT

ಈ ಬಗ್ಗೆ ಪ್ರಾಣಿಗಳ ಪರ ಹೋರಾಟಗಾರ, ನಟ ಜಾನ್‌ ಅಬ್ರಹಾಂ ಅವರು, ‘ಮೂಕ ಪ್ರಾಣಿಗಳು ನಮ್ಮ ನಡುವೆ ಇರಬೇಕು. ಅವುಗಳು ಮನುಷ್ಯರಿಂದ ಏನನ್ನೂ ಬಯಸದೆ ಪ್ರೀತಿ ನೀಡುತ್ತವೆ. ‘ಓಸ್ಲೋ: ಎ ಟೈಲ್ ಆಫ್ ಪ್ರಾಮಿಸ್' ಸತ್ಯಕ್ಕೆ ಹತ್ತಿರವಾದ ಸಾಕ್ಷ್ಯಚಿತ್ರ ಆಗಿದೆ. ಐಎಫ್‌ಎಫ್‌ಐನಲ್ಲಿ ಮೊದಲು ಪ್ರದರ್ಶನಗೊಳ್ಳಲು ಅವಕಾಶ ನೀಡಿದಕ್ಕೆ ನಾನು ಕೃತಜ್ಞನಾಗಿದ್ದೇನೆ' ಎಂದಿದ್ದಾರೆ.

ಐಎಫ್‌ಎಫ್‌ಐನ ಅತ್ಯಂತ ಪ್ರತಿಷ್ಠಿತ ರಾಷ್ಟ್ರೀಯ ವೇದಿಕೆಯಲ್ಲಿ ದೇಶಾದ್ಯಂತ 25 ಚಲನಚಿತ್ರಗಳು ಮತ್ತು 20 ನಾನ್-ಫೀಚರ್ ಚಿತ್ರಗಳನ್ನು ಪ್ರತಿ ವರ್ಷ ಆಯ್ಕೆ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.