ಮಿರೈ, ವಾರ್–2
ಚಿತ್ರ: ಇನ್‌ಸ್ಟಾಗ್ರಾಮ್
ಈ ವಾರ ಒಟಿಟಿಯ ವೇದಿಕೆಗಳಲ್ಲಿ ಹಲವಾರು ಹೊಸ ಸಿನಿಮಾಗಳು ತೆರೆ ಕಾಣುತ್ತಿವೆ. ಪ್ರಣಯ, ಆ್ಯಕ್ಷನ್, ಹಾಸ್ಯ ಸೇರಿದಂತೆ ಹಲವಾರು ಸಿನಿಮಾಗಳು ಅಕ್ಟೋಬರ್ 14ರವರೆಗೆ ಒಟಿಟಿಯಲ್ಲಿ ತೆರೆ ಕಾಣುತ್ತಿವೆ.
ಕ್ಯಾರಮೆಲ್ (Caramelo)
ಒಬ್ಬ ವ್ಯಕ್ತಿ ತನ್ನ ಇಡೀ ಜೀವನ ಶ್ವಾನದ ಜೊತೆಗೆ ಕಳೆಯುವ ಒಂದು ಹೃದಯಸ್ಪರ್ಶಿ ಸಿನಿಮಾ ಇದಾಗಿದೆ. ಅನಾರೋಗ್ಯದಿಂದ ಒಳಲುತ್ತಿದ್ದ ಅಡುಗೆ ಭಟ್ಟನ ಜೀವನವನ್ನೇ ಶ್ವಾನ ಬದಲಾಯಿಸುತ್ತದೆ. ಈ ಸಿನಿಮಾದಲ್ಲಿ ನಾಯಿ ಜೊತೆ ಸ್ನೇಹ ಬಾಂಧವ್ಯ ಹೇಗಿರುತ್ತದೆ ಎಂಬುವುದನ್ನು ತೋರಿಸಲಾಗಿದೆ.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಇಂಗ್ಲಿಷ್
ಬಿಡುಗಡೆ: ಅ.8
ವಾರ್ 2 (War 2)
ಜೂನಿಯರ್ ಎನ್‌ಟಿಆರ್ ಮತ್ತು ಹೃತಿಕ್ ರೋಷನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಚಿತ್ರ ಇದಾಗಿದೆ. ‘ವಾರ್ 2’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಒಟಿಟಿಗೆ ಬರುತ್ತಿದೆ. ಈ ಚಿತ್ರವು ದೇಶಭಕ್ತಿ ಮತ್ತು ಶೋಷಣೆಯ ನಡುವಿನ ಹೋರಾಟವನ್ನು ಒಳಗೊಂಡಿದೆ.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಹಿಂದಿ ಮತ್ತು ಇತರೆ
ಬಿಡುಗಡೆ: ಅ.9
ಜಮ್ನಾಪಾರ್ ಸೀಸನ್ 2 (Jamnapaar Season 2)
ಲಕ್ಷಾಂತರ ಪ್ರೇಕ್ಷಕರನ್ನು ಆಕರ್ಷಿಸಿದ್ದ 'ಜಮ್ನಾಪಾರ್' ಸೀಸನ್ 2 ಒಟಿಟಿ ವೇದಿಕೆಗೆ ಲಗ್ಗೆ ಇಟ್ಟಿದೆ. ಮೊದಲ ಸೀಸನ್ 2023ರ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾಯಿತು. ರಿತ್ವಿಕ್ ಸಹೋರ್ ನೇತೃತ್ವದ ಈ ಸರಣಿಯು ವರುಣ್ ಬಡೋಲಾ, ಅಂಕಿತಾ ಸೆಹಗಲ್, ಶ್ರಿಷ್ಟಿ ಗಂಗೂಲಿ ರಿಂದಾನಿ, ಅನುಭಾ ಫತೇಪುರಾ, ಧ್ರುವ್ ಸೆಹಗಲ್ ಮತ್ತು ಇಂದರ್ ಸಹಾನಿ ಸೇರಿದಂತೆ ಪ್ರಬಲ ತಾರಾಗಣವನ್ನು ಹೊಂದಿದೆ. ಈ ಸಾಲಿಗೆ ನಟ ವಿಜಯ್ ರಾಜ್ ಕೂಡ ಸೇರಿಕೊಂಡಿದ್ದಾರೆ.
ಎಲ್ಲಿ ನೋಡಬಹುದು: ಅಮೆಜಾನ್, MX ಪ್ಲೇಯರ್
ಭಾಷೆ: ಹಿಂದಿ
ಬಿಡುಗಡೆ: ಅ. 10
ನೈನಾ ಮರ್ಡರ್ ಕೇಸ್ (The Naina Murder Case)
ರೋಹನ್ ಸಿಪ್ಪಿ ನಿರ್ದೇಶನದಲ್ಲಿ ನೈನಾ ಮರ್ಡರ್ ಕೇಸ್ ಸಿನಿಮಾ ಮೂಡಿ ಬಂದಿದೆ. ಪೊಲೀಸ್ ಅಧಿಕಾರಿಯೂ ಈ ಸಿನಿಮಾದಲ್ಲಿ ರೋಮಾಂಚಕಾರಿ ತನಿಖೆ ಮಾಡುತ್ತಾರೆ. ಈ ಚಿತ್ರ ಗುಪ್ತ ಉದ್ದೇಶಗಳು ಮತ್ತು ಆಘಾತಕಾರಿ ಸತ್ಯಗಳನ್ನು ಬಿಚ್ಚಿಡುತ್ತದೆ. ಅಪರಾಧ, ಗೀಳಿನ ಸುತ್ತ ಕಥೆಯನ್ನು ಹೆಣೆಯಲಾಗಿದೆ.
ಎಲ್ಲಿ ನೋಡಬಹುದು: ಜಿಯೋ ಹಾಟ್ ಸ್ಟಾರ್
ಭಾಷೆ: ಹಿಂದಿ
ಬಿಡುಗಡೆ: ಅ. 10
ಮಹಾಭಾರತದ ಮಹಾ ಯುದ್ಧ (The Great War of Mahabharata)
ಮಹಾಭಾರತದ ಮಹಾಯುದ್ಧವು ಕುರುಕ್ಷೇತ್ರ ಯುದ್ಧ ಎಂದೂ ಕರೆಯಲ್ಪಡುತ್ತದೆ. ಇದು ಹಸ್ತಿನಾಪುರ ಸಿಂಹಾಸನಕ್ಕಾಗಿ ಪಾಂಡವರು ಮತ್ತು ಕೌರವರ ನಡುವೆ ನಡೆದ ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ ವಿವರಿಸಲಾದ 18 ದಿನಗಳ ರಾಜವಂಶದ ಸಂಘರ್ಷವಾಗಿದೆ.
ಎಲ್ಲಿ ನೋಡಬಹುದು: ನೆಟ್‌ಫ್ಲಿಕ್ಸ್
ಭಾಷೆ: ಹಿಂದಿ
ಬಿಡುಗಡೆ: ಅ. 10
ಮಿರೈ (Mirai)
ಕಾರ್ತಿಕ್ ಘಟ್ಟಮನೇನಿ ನಿರ್ದೇಶನದ ತೇಜ ಸಜ್ಜಾ ನಾಯಕನಾಗಿ ನಟಿಸಿರುವ ಮಿರೈ ಚಿತ್ರವು ಒಟಿಟಿಗೆ ಎಂಟ್ರಿ ಕೊಟ್ಟಿದೆ. ಹನುಮಾನ್ ನಂತರ ನಟ ತೇಜ ಸಜ್ಜಾ ಅವರು ಮಿರೈ ಸಿನಿಮಾದಲ್ಲಿ ನಟಿಸಿದ್ದಾರೆ.
ಎಲ್ಲಿ ನೋಡಬಹುದು: ಜಿಯೋ ಹಾಟ್‌ಸ್ಟಾರ್
ಭಾಷೆ: ಕನ್ನಡ ಮತ್ತು ಇತರೆ
ಬಿಡುಗಡೆ: ಅ.10
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.